ಡಿ.20ರಿಂದ ಮಂಜನಾಡಿ ಉರೂಸ್

Prasthutha|

ಉಳ್ಳಾಲ: ಮಂಜನಾಡಿಯ ಹಝ್ರತ್ ಅಸ್ಸಯ್ಯಿದ್ ಇಸ್ಮಾಯಿಲ್ ಅಲ್-ಬುಖಾರಿ ಅವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿರುವ ಉರುಸ್‌ ಡಿ.20ರಿಂದ 30ರವರೆಗೆ ನಡೆಯಲಿದೆ ಎಂದು ತಿಳಿಸಲಾಗಿದೆ. ಇಂದು ಮಂಜನಾಡಿ ಜುಮಾ ಮಸ್ಜಿದ್ ಮುದರ್ರಿಸ್ ಪಿ‌.ಎ.ಅಹ್ಮದ್ ಬಾಖವಿ ಧ್ವಜಾರೋಹಣ ನೆರವೇರಿಸಿ ಉರೂಸ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದಾರೆ. ಈ ವರ್ಷ ಎಲ್ಲರ ಸಹಕಾರದೊಂದಿಗೆ ವಿಜೃಂಭಣೆಯಿಂದ ಉರೂಸ್‌ ನಡೆಯಲಿದೆ‌ ಎಂದು ಅವರಯ ಹೇಳಿದ್ದಾರೆ.

- Advertisement -

ನರಿಂಗಾನ ಗ್ರಾ.ಪಂ ಅಧ್ಯಕ್ಷ ನವಾಝ್ ನರಿಂಗಾನ, ಮಂಜನಾಡಿ ಜುಮಾ‌ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಅಝೀಝ್ ಪರ್ತಿಪ್ಪಾಡಿ, ಉಪಾಧ್ಯಕ್ಷ ಬಸರ ಮೊಹಿದ್ದೀನ್ ಹಾಜಿ, ಜತೆ ಕಾರ್ಯದರ್ಶಿಗಳಾದ ಎನ್‌.ಐ. ಮುಹಮ್ಮದ್, ಬಾಪ ಕುಂಞ, ಹಮೀದ್ ಆರಂಗಡಿ, ಮಾಜಿ ಅಧ್ಯಕ್ಷ ಆಲಿ ಕುಂಞ ಹಾಜಿ ಪಾರೆ, ಸಹಾಯಕ ಮುದರ್ರಿಸ್ ಮಸೂದ್ ಸ ಅದಿ, ಸಮಿತಿ ಸದಸ್ಯರಾದ ಎ‌.ಇ.ಇಬ್ರಾಹಿಂ, ಕಲ್ಕಟ್ಟ ಅಬ್ದುರ್ರಹ್ಮಾನ್ ರಝ್ವಿ, ಟಿ. ಕುಂಞ, ಇಬ್ರಾಹಿಂ ಇಬ್ಬಾ, ಕುಂಞ ಚೌಕ, ಬಾವಿಚ್ಚ ಮುತ್ತಹಿತ್ಲು, ಉಮರ್ ಮೊರ್ಲ, ಮುನೀರ್ ಬಾವ, ಜಮಾಅತ್ ಸದಸ್ಯರಾದ ಮುನೀರ್ ಬಸರ, ಅಶ್ರಫ್ ಬಸರ, ನವಾಝ್ ಎ.ಇ, ಅಶ್ರಫ್ ಮೈಸೂರು,‌ ಕೆ.ಜೆ ಇಬ್ರಾಹಿಂ ಉಪಸ್ಥಿತರಿದ್ದರು.

Join Whatsapp