ಅತ್ಯಾಚಾರ ಪ್ರಕರಣ| ಬಿಷಪ್ ಫ್ರಾಂಕೋ ಖುಲಾಸೆ ವಿರುದ್ಧ ಮೇಲ್ಮನವಿಗೆ ಮುಂದಾದ ಕೇರಳ ಪೊಲೀಸ್‌‌

Prasthutha|

ತಿರುವನಂತಪುರಂ: ಬಿಷಪ್ ಫ್ರಾಂಕೋ ಮುಲಕ್ಕಲ್‌ ಅವರನ್ನು ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪದಿಂದ ಖುಲಾಸೆಗೊಳಿಸಿರುವುದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೇರಳ ಪೊಲೀಸ್ ಮುಂದಾಗಿದೆ.

- Advertisement -


ಕೊಟ್ಟಾಯಂ ಸೆಷನ್ಸ್‌ ನ್ಯಾಯಾಲಯವು ಬಿಷಪ್‌ ಫ್ರಾಂಕೋ ಮುಲಕ್ಕಲ್‌ ಅವರನ್ನು ಕಾನ್ವೆಂಟ್‌ನಲ್ಲಿ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರದ ಆರೋಪದಿಂದ ಇತ್ತಿಚೆಗೆ ಖುಲಾಸೆಗೊಳಿಸಿತ್ತು. ಇದಾಗಿ ಒಂದು ದಿನದ ನಂತರ, ಕೇರಳ ಪೊಲೀಸರು ಹೈಕೋರ್ಟ್‌ನಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನು ಸಲಹೆಯನ್ನು ಕೋರಿದ್ದಾರೆ ಎಂದು ವರದಿಯಾಗಿದೆ.

ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಪೊಲೀಸರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ನಿಂದ ಕಾನೂನು ಅಭಿಪ್ರಾಯ ಕೇಳಿದ್ದಾರೆ ಎಂದು ಕೊಟ್ಟಾಯಂ ಎಸ್‌ಪಿ ಡಿ. ಶಿಲ್ಪಾ ಹೇಳಿದ್ದಾರೆ.

- Advertisement -

ಜಲಂಧರ್ ಡಯಾಸಿಸ್‌ನ ಬಿಷಪ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ, ಮಿಷನರೀಸ್ ಆಫ್ ಜೀಸಸ್ ಸಭೆಗೆ ಸೇರಿದ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಫ್ರಾಂಕೋ ಮೇಲೆ ಹೊರಿಸಲಾಗಿತ್ತು. 2014 ಮತ್ತು 2016 ರ ನಡುವೆ ಕೇರಳಕ್ಕೆ ಭೇಟಿ ನೀಡಿದಾಗ, 43 ವರ್ಷದ ಸನ್ಯಾಸಿನಿಯ ಮೇಲೆ 13 ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪ ಹೊರಿಸಲಾಗಿತ್ತು.

ಈ ಮಧ್ಯೆ, ಫ್ರಾಂಕೋ ತನ್ನ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ ಎರಡೂ ನ್ಯಾಯಾಲಯಗಳು ಇದನ್ನು ನಿರಾಕರಿಸಿದ್ದವು. ಅಂತಿಮವಾಗಿ ಜನವರಿ 14 ರಂದು ಕೊಟ್ಟಾಯಂ ಸೆಷನ್ಸ್‌ ನ್ಯಾಯಾಲಯವು ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.



Join Whatsapp