ವಿವಾಹಿತೆಯ ಮೇಲೆ ಅತ್ಯಾಚಾರ | ಬಿಜೆಪಿ ಶಾಸಕನ ವಿರುದ್ಧ ದೂರು ದಾಖಲು

Prasthutha|

ಡೆಹ್ರಾಡೂನ್ : ಇಲ್ಲಿನ ವಿವಾಹಿತ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಬಿಜೆಪಿ ಶಾಸಕ ಮಹೇಶ್ ಸಿಂಗ್ ನೇಗಿ ವಿರುದ್ಧ ಉತ್ತರಾಖಂಡ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ದೂರುದಾರರು ಸಲ್ಲಿಸಿದ್ದ ಅರ್ಜಿಯ ಆಧಾರದಲ್ಲಿ ಹೆಚ್ಚುವರಿ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಪೊಲೀಸರಿಗೆ ದೂರು ದಾಖಲಿಸಿಕೊಳ್ಳುವಂತೆ ಆದೇಶಿಸಿದ ಬಳಿಕ, ಈ ದೂರು ದಾಖಲಾಗಿದೆ. ಶಾಸಕರ ಪತ್ನಿ ವಿರುದ್ಧವೂ ದೂರು ದಾಖಲಾಗಿದೆ.

- Advertisement -

ಶಾಸಕರ ವಿರುದ್ಧ ದೂರು ದಾಖಲಾಗಿರುವುದನ್ನು ನೆಹರೂ ಕಾಲನಿ ಪೊಲೀಸ್ ಎಸ್ ಎಚ್ ಒ ರಾಕೇಶ್ ಗೊಸೇನ್ ದೃಢಪಡಿಸಿದ್ದಾರೆ.

ಶಾಸಕ ನೇಗಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇದನ್ನು ದೃಢಪಡಿಸಲು ತನ್ನ ಮಗುವಿನ ಡಿಎನ್ ಎ ಪರೀಕ್ಷೆ ಮಾಡಬಹುದು ಎಂದು ಆ.16ರಂದು ಮಹಿಳೆ ದೂರು ನೀಡಿದ್ದಳು. ಆದರೆ, ಪೊಲೀಸರು ಸರಿಯಾಗಿ ಪ್ರತಿಕ್ರಿಯಿಸದ ಕಾರಣ ಆಕೆ ಕೋರ್ಟ್ ಮೆಟ್ಟಿಲೇರಿದ್ದರು. ನೇಗಿ ಅಲ್ಮೋರ ಜಿಲ್ಲೆಯ ದ್ವಾರಾಹತ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.

Join Whatsapp