ಜಾಮೀನಿನಲ್ಲಿ ಹೊರಗಿದ್ದ ದುಷ್ಕರ್ಮಿಯಿಂದ ಅತ್ಯಾಚಾರ ಸಂತ್ರಸ್ತೆಯ ಮೇಲೆ ಮತ್ತೊಮ್ಮೆ ಅತ್ಯಾಚಾರ

Prasthutha|

ಜೈಪುರ : ರಾಜಸ್ಥಾನದ ಜೈಪುರದಲ್ಲಿ ಆರೋಪಿಯೊಬ್ಬ 17 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿ ಜೈಲು ಸೇರಿದ್ದ. ಇದೀಗ ಜಾಮೀನು ಮೂಲಕ ಹೊರಗೆ ಬಂದು ಅದೇ ಹುಡುಗಿಯ ಮೇಲೆ ಆತ ಮತ್ತೊಮ್ಮೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ಆರೋಪಿ ತಲೆ ಮರೆಸಿಕೊಂಡಿದ್ದಾನೆ.

- Advertisement -

ಬಗ್ರುವಿನ ಮನೆಯೊಂದಕ್ಕೆ ಆಕೆಯನ್ನು ಕರೆದೊಯ್ದು ಅತ್ಯಾಚಾರ ನಡೆಸಲಾಗಿದೆ. ಹೆತ್ತವರು ದೂರು ನೀಡಿದ ಬಳಿಕ, ಹುಡುಗಿಯನ್ನು ರಕ್ಷಿಸಲಾಗಿದೆ.

ಈ ಹಿಂದೆಯೂ ಇದೇ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಮತ್ತು ಅಪಹರಣ ಮಾಡಿದ ಆರೋಪದಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಿಂದಿನ ಪ್ರಕರಣದಲ್ಲಿ ಆರೋಪಿ ಬಂಧಿತನಾಗಿದ್ದು, ಆತನ ವಿರುದ್ಧ ದೋಷಾರೋಪ ದಾಖಲಾಗಿದೆ.

Join Whatsapp