ಬಾಳೆಹೊನ್ನೂರು | ಲಾಕಪ್ ಚಿಲಕ ತೆಗೆದು ಠಾಣೆಯಿಂದಲೇ ಎಸ್ಕೇಪ್ ಆದ ಅತ್ಯಾಚಾರ ಆರೋಪಿ !

Prasthutha|

ಬಾಳೆಹೊನ್ನೂರು: ಬಂಧನಕ್ಕೊಳಗಾಗಿದ್ದ ಅತ್ಯಾಚಾರ ಆರೋಪಿ ಪೊಲಿಸ್ ಠಾಣೆಯ ಲಾಕಪ್ ಚಿಲಕವನ್ನೇ ತೆಗೆದು ಎಸ್ಕೇಪ್ ಆಗಿರುವ ಘಟನೆ ಭಾನುವಾರ ನಡೆದಿದೆ. ಬಾಲಕಿಯ ಮೇಲೆ ಅತ್ಯಾಚಾರವೆಸಗಿ ನಗರದ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪೊಲಿಸ್ ಠಾಣೆಯಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ ಪರಾರಿಯಾಗಿದ್ದಾನೆ.

- Advertisement -

ಪರಾರಿಯಾದ ಆರೋಪಿಯನ್ನು ನಿಜಾಂ ಎಂದು ಗುರುತಿಸಲಾಗಿದ್ದು, 12 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಠಾಣೆಯ ಸೆಲ್ ನಲ್ಲಿ ಇರಿಸಲಾಗಿತ್ತು, ಆದರೆ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದ ಸಮಯ ನೋಡಿ ಆರೋಪಿ ಲಾಕಪ್ ಚಿಲಕವನ್ನೇ ತೆಗೆದು ಪರಾರಿಯಾಗಿದ್ದಾನೆ. ಪರಾರಿಯಾದ ಆರೋಪಿಗಾಗಿ ಪೊಲೀಸರು ಶೋಧಕಾರ್ಯವನ್ನು ಆರಂಭಿಸಿದ್ದಾರೆ.

Join Whatsapp