ಭಾರತದಲ್ಲಿ 2022ರ ಹಜ್ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ | ಮುಖ್ತಾರ್ ನಖ್ವಿ

Prasthutha|

ಮುಂಬೈ: 2022ರ ಹಜ್ ಪ್ರಕ್ರಿಯೆಯು ಭಾರತದಲ್ಲಿ ಸಂಪೂರ್ಣವಾಗಿ ಡಿಜಿಟಲ್ ಗೊಳ್ಳಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ. ಮುಂಬೈನ ಹಜ್ ಹೌಸಿನಲ್ಲಿ ಆನ್ ಲೈನ್ ಬುಕಿಂಗ್ ಸೌಲಭ್ಯ ಉದ್ಘಾಟಿಸಿ ಮಾತನಾಡಿದ ಅವರು ಹಜ್ ಸಮಿತಿಯ ಹಿರಿಯ ಅಧಿಕಾರಿಗಳೊಂದಿಗೆ ಹಜ್-2022 ಸಿದ್ಧತೆಗಳ ಕುರಿತು ಚರ್ಚಿಸಲಾಗಿದೆ ಎಂದರು.

- Advertisement -

ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಭಾರತ ಮತ್ತು ಇನ್ನಿತರ ರಾಷ್ಟ್ರಗಳಿಗೆ 2020 ಮತ್ತು 2021ರ ಹಜ್ಜ್ ಯಾತ್ರೆಯನ್ನು ಸಛದಿ ಅರೇಬಿಯಾ ನಿರ್ಭಂಧಿಸಿತ್ತು. ಇದೀಗ 2022ರ ಹಜ್ ಯಾತ್ರೆಯ ಪ್ರಕ್ರಿಯೆಯನ್ನು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಘೋಷಿಸಲಾಗುವುದು ಎಂದು ನಖ್ವಿ ಇದೇ ಸಂಧರ್ಭದಲ್ಲಿ ತಿಳಿಸಿದ್ದಾರೆ. ಅಲ್ಲದೇ ಭಾರತವು ಇಂಡೊನೇಷಿಯಾದ ನಂತರ ಅತೀ ಹೆಚ್ಚು ಹಜ್ಜ್ ಯಾತ್ರಿಕರನ್ನು ಕಳುಹಿಸುತ್ತದೆ ಎಂದರು.

2022ರ ಹಜ್ಜ್ ಪರಿಶೀಲನಾ ಸಭೆಯು ಅಕ್ಟೋಬರ್ 21ರಂದು ದೆಹಲಿಯಲ್ಲಿ ನಡೆಯಲಿದ್ದು, ಆರೋಗ್ಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಸೇರಿದಂತೆ ಸೌದಿ ಅರೇಬಿಯಾದ ಭಾರತದ ರಾಯಭಾರಿ, ಜಿದ್ದಾದ ಭಾರತದ ಕಾನ್ಸುಲ್ ಜನರಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.

Join Whatsapp