ಐಸಿಸ್ ಹೆಸರಿನಲ್ಲಿ ಬೆದರಿಕೆ ಪತ್ರ ರವಾನೆ: ಸಂಘಪರಿವಾರ ಕಾರ್ಯಕರ್ತನ ಬಂಧನ

Prasthutha|

ರಾಂಪುರ: ಉತ್ತರ ಪ್ರದೇಶದ ರಾಂಪುರದ ಹಳ್ಳಿಯೊಂದರಲ್ಲಿ ಐಸಿಸ್ ಹೆಸರಿನಲ್ಲಿ ಬೆದರಿಕೆ ಪತ್ರಗಳನ್ನು ರವಾನಿಸಿದ ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತನನ್ನು ಅವಧೇಶ್ ಪ್ರತಾಪ್ ಸಿಂಗ್ ಅಲಿಯಾಸ್ ಅಭಿಷೇಕ್ ಪ್ರತಾಪ್ ಎಂದು ಗುರುತಿಸಲಾಗಿದ್ದು, ಈತ ನಾಗರಿಕ ಸೇವೆಯ ನೌಕರಿ ಪಡೆಯಲು ತಯಾರಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಐಎಎಸ್’ನಲ್ಲಿ ಯಶಸ್ವಿಯಾಗಲು ಮತ್ತು ಐಎಎಸ್’ಗೆ ಲ್ಯಾಟರಲ್ ನೇಮಕಾತಿ ಪಡೆಯಲು ಐಸಿಸ್ ಹೆಸರಿನಲ್ಲಿ ಬೆದರಿಕೆ ಪತ್ರ ಬರೆಯುವ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ರಾಂಪುರದ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ವಾ ಗ್ರಾಮದಲ್ಲಿ ಜುಲೈ 21 ರಂದು ಸ್ಥಳೀಯ ನಿವಾಸಿ ಕುಲದೀಪ್ ಸಿಂಗ್ ಎಂಬವರ ಮನೆಯಲ್ಲಿ ಐಸಿಸ್ ಧ್ವಜವಿರುವ ನಾಲ್ಕು ಪತ್ರಗಳು ಪತ್ತೆಯಾಗಿತ್ತು. ಪ್ರತಿ ಲೆಟರ್ ನಲ್ಲಿ ಒಬ್ಬನ ಹೆಸರನ್ನು ಬರೆಯಲಾಗಿತ್ತು. ಪತ್ರದಲ್ಲಿ ಬಳಸಿದ ಭಾಷೆ ಮತ್ತು ಕೈ ಬರಹ ಒಂದೇ ತರಹ ಆಗಿತ್ತು. ಈ ಪತ್ರದಲ್ಲಿ ಐಸಿಸ್ ಎಂದು ಬರೆಯಲಾಗಿದ್ದು, ಕೊಲೆ ಬೆದರಿಕೆ ಹಾಕಿದೆ. ಇದರ ಜಾಡು ಹಿಡಿದ ಪೊಲೀಸರು ಸಂಘಪರಿವಾರದ ಕಾರ್ಯಕರ್ತ ಅವಧೇಶ್ ಪ್ರತಾಪ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ.

Join Whatsapp