ಕೊಡಗು: ಕೆಎಸ್ಆರ್‌ ಟಿ ಸಿ ಬಸ್ ಅಪಘಾತ; ಇಬ್ಬರಿಗೆ ಗಂಭೀರ ಗಾಯ

Prasthutha|

ಮಡಿಕೇರಿ: ನಿಯಂತ್ರಣ ಕಳೆದುಕೊಂಡ ಕೆಎಸ್ಆರ್‌ ಟಿ ಸಿ ಬಸ್ ಬರೆಗೆ ಜಾರಿದ ಘಟನೆ ಕುಶಾಲನಗರ ಸಮೀಪದ ಆನೆಕಾಡು ಬಳಿ ನಡೆದಿದೆ.

- Advertisement -


ಹಾಸನದಿಂದ ಮಡಿಕೇರಿಗೆ ಬರುತ್ತಿದ್ದ ಈ ಬಸ್ ನಲ್ಲಿ 44 ಮಂದಿ ಪ್ರಯಾಣಿಕರಿದ್ದರು. ತಾಂತ್ರಿಕ ಸಮಸ್ಯೆಯಾಗಿ ಸೆಟ್ ಪರ್ಜ್ ತುಂಡಾದ ಕಾರಣ ನಿಯಂತ್ರಣ ತಪ್ಪಿದೆ.


ಪ್ರಯಾಣಿಕರ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು,ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಕುಶಾಲನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp