ರಮೇಶ್ ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೈ ತೋರಿಸಿದ ಬಿಜೆಪಿ

Prasthutha|

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಹಾಗೂ ಬೆಳಗಾವಿ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಎಂಬಾತನ ಮೇಲೆ ಚಾಕು ಇರಿತ ಆಗಿದ್ದು, ಬಿಜೆಪಿಗರ ಕೈ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಡೆಗೆ ತಿರುಗಿದೆ. ಬೆಳಗಾವಿಯ ಜಯನಗರದಲ್ಲಿ ನಿವಾಸದ ಬಳಿಯಲ್ಲಿ ಘಟನೆ ನಡೆದಿದ್ದು, ಪೃಥ್ವಿ ಸಿಂಗ್ ಕೈ ಹಾಗೂ ಬೆನ್ನಿನ ಭಾಗದಲ್ಲಿ ತೀವ್ರವಾಗಿ ಗಾಯವಾಗಿದೆ. ಕೂಡಲೇ ಕೆಎಲ್‌ಇ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗತ್ತಿದೆ.

- Advertisement -

ಈ ಕೃತ್ಯದ ಹಿಂದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಆಪ್ತರೇ ಇರೋದೆಂದು ಬಿಜೆಪಿಗರು ಹೇಳುತ್ತಿದ್ದು, ಚನ್ನರಾಜ್ ಆಪ್ತರು ಪೃಥ್ವಿ ಸಿಂಗ್ ಜೊತೆ ಮಾತನಾಡುತ್ತಿರುವ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ. ಸೂಕ್ತ ತನಿಖೆಗೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ರಾಜಕೀಯ ದುರುದ್ದೇಷದಿಂದ ಹಲ್ಲೆ ಆಗಿದೆ ಎಂದಿದ್ದಾರೆ. ರಾಜಕೀಯ ಪಕ್ಷಗಳ ನಡವೆ ಅಭಿಪ್ರಾಯ ಸಹಜ. ಆದರೆ ರಾಜ್ಯದಲ್ಲಿ ಈಗಿರೋ ಸರ್ಕಾರ ವಿರೋಧಿಗಳನ್ನು ಟಾರ್ಗೆಟ್ ಮಾಡುತ್ತಿದೆ. ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ, ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

- Advertisement -

ಘಟನೆ ಬಗ್ಗೆ ಗಾಯಾಳು ಪೃಥ್ವಿ ಸಿಂಗ್ ಪುತ್ರ ಜಶ್ವಿರ್‌ ಸಿಂಗ್ ಮಾತಾಡಿದ್ದು, ಸಂಜೆ 4.50ಕ್ಕೆ ಚನ್ನರಾಜ ಹಟ್ಟಿಹೊಳಿ, ಸದ್ದಾಂ, ಸುಜಯ್ ನಮ್ಮ ಮನೆಯ ಹತ್ತಿರ ಬಂದಿದ್ದರು. ಈ ವೇಳೆ ನಮ್ಮ ತಂದೆಗೆ ಧಮ್ಕಿ ಹಾಕಿದ್ರು ಎಂದಿದ್ದಾರೆ. ಹಳೆ ವಿಚಾರ ಕೆದಕಿ ವಾಗ್ವಾದ ಆಯಿತು ಅಂತ ಹೇಳಿದ್ದಾರೆ.

ಜಗಳ ಆಗುತ್ತಿದ್ದಂತೆ ನಮ್ಮ ತಂದೆ ಡಿಸಿಪಿ ಅವರಿಗೆ ಪೋನ್ ಮಾಡಿ ಮಾತನಾಡಿದರು. ಈ ವೇಳೆ ಚನ್ನರಾಜ ಹಟ್ಟಿಹೊಳಿ ತಂದೆಯ ಪೋನ್ ಕಸಿದುಕೊಂಡು ಹಲ್ಲೆ ಮಾಡಿದ್ದಾರೆ. ಪ್ರಜ್ಞೆ ತಪ್ಪುವ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ. ಐದು ಜನ ಬಂದಿದ್ರು ಕಾರಿನಲ್ಲಿ ಚನ್ನರಾಜ ಹಟ್ಟಿಹೊಳಿ ಇದ್ರು ಅಂತ ಪೃಥ್ವಿ ಸಿಂಗ್ ಪುತ್ರ ಜಶ್ವಿರ್‌ ಸಿಂಗ್ ಹೇಳಿದ್ದಾರೆ.

ಘಟನೆ ಸಂಬಂಧವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಲು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

Join Whatsapp