ಮೈತ್ರಿಕೂಟದ ಸಭೆಗೆ ಮಮತಾ ಬ್ಯಾನರ್ಜಿ ಗೈರು

Prasthutha|

ಕೋಲ್ಕತ್ತ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ INDIA ಮೈತ್ರಿಕೂಟದ ಸಭೆ ಡಿ.06 ರಂದು ನಡೆಯಲಿದ್ದು, ಕಾಂಗ್ರೆಸ್ ಸೋಲಿನ ಬಗ್ಗೆ ಮೈತ್ರಿಕೂಟದ ಸದಸ್ಯರು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಮಿತ್ರಪಕ್ಷಗಳೊಂದಿಗೆ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ಸಲಹೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ತೀವ್ರವಾಗಿ ಕಾಂಗ್ರೆಸನ್ನು ಹಳಿದಿದ್ದಾರೆ‌. ಈ ಮಧ್ಯೆ ಈ ನಡುವೆ ಡಿ.06 ರ ಸಭೆಗೆ ಮಮತಾ ಬ್ಯಾನರ್ಜಿ ಗೈರಾಗುವ ಸೂಚನೆ ನೀಡಿದ್ದಾರೆ.

- Advertisement -

ಅದೇ ದಿನದಂದು ಉತ್ತರ ಬಂಗಾಳದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳಿವೆ. INDIA ಮೈತ್ರಿಕೂಟದ ಸಭೆಯ ಬಗ್ಗೆ ನನಗೆ ಅರಿವಿಲ್ಲ. ಆದ್ದರಿಂದಲೇ ನಾನು ಉತ್ತರ ಬಂಗಾಳದಲ್ಲಿ ಹಲವು ಕಾರ್ಯಕ್ರಮಗಳಿಗೆ ತೆರಳುವುದು ನಿಗದಿಯಾಗಿದೆ ಎಂದು ಹೇಳಿದ್ದಾರೆ. ಸಭೆಯ ಬಗ್ಗೆ ಮಾಹಿತಿ ಇದ್ದಿದ್ದರೆ, ನಾನು ಖಂಡಿತವಾಗಿಯೂ ಅದಕ್ಕೆ ಹೋಗುತ್ತಿದ್ದೆ. ಆದರೆ ನಮಗೆ ಯಾವುದೇ ಮಾಹಿತಿ ಇಲ್ಲದ ಕಾರಣ ನಾನು ಉತ್ತರ ಬಂಗಾಳ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದು ವಿವರಿಸಿದ್ದಾರೆ‌.

ಮಮತಾ ಬ್ಯಾನರ್ಜಿ ಈ ಹೇಳಿಕೆಯ ಬಳಕ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್, ಈ ಸಭೆ ಅನೌಪಚಾರಿಕ ಸಭೆಯಾಗಿದೆ ಎಂದು ಹೇಳಿದ್ದಾರೆ.

Join Whatsapp