ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಪೂರ್ಣ : ಸಂತ್ರಸ್ತ ಮಹಿಳೆಯೇ ಜೈಲು ಪಾಲಾಗುವ ಸಾಧ್ಯತೆ ?

Prasthutha|

►ಅಂತಿಮ ವರದಿ ಸಲ್ಲಿಕೆಗೆ ಕ್ಷಣಗಣನೆ

- Advertisement -

ಜುಲೈ 27 : ಬಿಜೆಪಿಯ ಮಾಜಿ ಸಚಿವ ರಮೇಶ್ ಜಾರಕೀಹೊಳಿ ಯವರ ಮೇಲೆ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ, ಲೈಂಗಿಕ ದೌರ್ಜನ್ಯ,  ಸಿಡಿ ಪ್ರಕರಣವನ್ನು ತನಿಖೆ ನಡೆಸಿದ ಬೆಂಗಳೂರು ಪೊಲೀಸರ ವಿಶೇಷ ತನಿಖಾ ತಂಡ (ಎಸ್.ಐ.ಟಿ) ತನಿಖೆ ಪೂರ್ತಿಗೊಳಿಸಿದೆ. ಸಿಡಿಯಲ್ಲಿ ಕಾಣಿಸಿಕೊಂಡ ಶಾಸಕರು ಸಂತ್ರಸ್ತ ಮಹಿಳೆ ಸೇರಿದಂತೆ ಹಲವರ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿದ್ದರು. 

ಮಹಿಳೆ ಸಲ್ಲಿಸಿದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಯಲ್ಲಿ ಎಸ್.ಐ.ಟಿ ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದರೇ ಬಿಜೆಪಿ ಶಾಸಕರು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳೆ ಮತ್ತು ಇನ್ನಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪುರಾವೆಗಳು ದೊರೆತಿದೆಯೆಂದು ಮೂಲಗಳು ತಿಳಿಸಿದೆ. ಎಂಜಿನಿಯರಿಂಗ್ ಪದವೀಧರ ಮಹಿಳೆಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಮನೆಗೆ ಕರೆಯಿಸಿ ಅತ್ಯಾಚಾರ,ಲೈಂಗಿಕ ದೌರ್ಜನ್ಯ ಮತ್ತು ಸಿಡಿ ಬಿತ್ತರಣೆ ಮೂಲಕ ಮಾನಹರಣ ಮಾಡಿದ್ದಾರೆಂದು ನೀರಾವರಿ ಸಚಿವ ರಮೇಶ್ ಜಾರಕಿಹೊಳಿಯವರ ವಿರುದ್ಧ ದೂರು ನೀಡಿದ್ದರು.

- Advertisement -

 ಈ ಕುರಿತು ತನಿಖೆ ನಡೆಸಿದ ಸಿಟ್ ಮಹಿಳೆಯ ಈ ಎಲ್ಲಾ ಆರೋಪಕ್ಕೆ ಯಾವುದೇ ಪುರಾವೆ ಮತ್ತು ಸಾಕ್ಷಿಯಿಲ್ಲವೆಂದು ಸಿಟ್ ಖಚಿತಪಡಿಸಿದೆ. ಈ ನಿಟ್ಟಿನಲ್ಲಿ ಆರೋಪಿ ರಮೇಶ್ ರವರ ಕೇಸ್ ಅನ್ನು ಖುಲಾಸೆಗೊಳಿಸುವ ಮತ್ತು ಸುಲಿಗೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಸಿಟ್ ತೀರ್ಮಾನಿಸಿದೆ ಎನ್ನಲಾಗಿದೆ. ನೀರಾವರಿ ಮತ್ತು ಜಲಸಂಪನ್ಮೂಲ ಸಚಿವರಾಗಿದ್ದ ಜಾರಕಿಹೊಳಿ ಸಂಪರ್ಕಿಸಿದ ಮಹಿಳೆ ಅಣೆಕಟ್ಟು ಚಿತ್ರೀಕರಣದ ಸೋಗಿನಲ್ಲಿ ಸಚಿವರೊಂದಿಗೆ ಅನ್ಯೋನ್ಯತೆಯನ್ನು ಬೆಳೆಸಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ

ಸುಲಿಗೆ ಪ್ರಕರಣದ ತನಿಖೆಯಲ್ಲಿ ಬಿಜೆಪಿ ಶಾಸಕರನ್ನು ಬಲೆಗೆ ಬೀಳಿಸಿ ಮಹಿಳೆಯೊಂದಿಗೆ ಲೈಂಗಿಕ ಚಟುವಟಿಕೆಯ ವೀಡಿಯೋ ಚಿತ್ರೀಕರಿಸಿ ಶಾಸಕರನ್ನು ಬ್ಲ್ಯಾಕ್ ಮೇಲ್ ಮಾಡಲು ಸಂಚು ರೂಪಿಸಿರುವ ಕುರಿತು ಪುರಾವೆ ಲಭಿಸಿದೆಯೆಂದು ಮೂಲಗಳು ತಿಳಿಸಿದೆ. ತನಿಖೆಯ ವೇಳೆಯಲ್ಲಿ ಕೃತ್ಯಕ್ಕೆ ಬಳಸಿದ ಕ್ಯಾಮರಾವನ್ನು ವಶಪಡಿಸಿದೆ. ಸುಲಿಗೆ ಪ್ರಕರಣಕ್ಕೆ ಸಂಬಂದಿಸಿದಂತೆ ಸಂತ್ರಸ್ತೆ ಮಹಿಳೆಯೊಂದಿಗೆ ನರೇಶ್ ಗೌಡ ಮತ್ತು ಶ್ರವಣ್ ಕುಮಾರ್ ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿದೆ. ತನಿಖೆ ಪೂರ್ಣಗೊಂಡ ಬಗ್ಗೆ ಎಸ್‌ಐಟಿ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದು, ತನಿಖೆಯ ಬೆಳವಣಿಗೆ ಕುರಿತು ಕೆಳ ನ್ಯಾಯಾಲಯದಲ್ಲಿ ವರದಿ ಸಲ್ಲಿಸಲು ಅನುಮತಿಗಾಗಿ ಕಾಯುತ್ತಿದೆ.

ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಯವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಈ ಕುರಿತು ಮಾತನಾಡಿದ ರಮೇಶ್ ಹನಿಟ್ರ್ಯಾಪ್ ನ ಮೂಲಕ ನನ್ನನ್ನು ಸಿಲುಕಿಸಲು ಪ್ರಯತ್ನಿಸಲಾಗಿದೆಯೆಂದು ಹೇಳಿದ್ದರು. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟ್ ಜಾರಕಿಹೊಳಿ ವಿರುದ್ದ ಲೈಂಗಿಕ ದೌರ್ಜನ್ಯ, ಮೂವರ ಮೇಲೆ ಸುಲಿಗೆ ಪ್ರಕರಣ, ಮಹಿಳೆಯ ಅಪಹರಣ ಸೇರಿದಂತೆ ಒಟ್ಟು ಮೂರು ಎಫ್.ಐ.ಆರ್ ದಾಖಲಿಸಲಾಗಿದೆ. ಮಹಿಳೆ ಮ್ಯಾಜಿಸ್ಟ್ರೇಟ್ ಗೆ ನೀಡಿದ ಹೇಳಿಕೆಯ ಆಧಾರದ ಮೇಲೆ ಮಹಿಳೆಯ ತಂದೆ ಸಲ್ಲಿಸಿದ ಅಪಹರಣ ಪ್ರಕರಣದಲ್ಲಿ ಎಸ್ಐಟಿ ಈವರೆಗೆ ಪ್ರಕರಣವನ್ನು ಮುಚ್ಚುವ ವರದಿಯನ್ನು ಸಲ್ಲಿಸಿದೆ.



Join Whatsapp