ಪೆಗಾಸೆಸ್ ಕಣ್ಗಾವಲು ಹಗರಣದ ಕುರಿತು ಸ್ವತಂತ್ರ ತನಿಖೆಗೆ ಸುಪ್ರೀಮ್ ಕೋರ್ಟ್ ಕದ ತಟ್ಟಿದ ಪತ್ರಕರ್ತರು

Prasthutha|

ನವದೆಹಲಿ ಜುಲೈ 27 : ಇಸ್ರೇಲಿ ಮೂಲದ ಸ್ಪೈವೇರ್ ಪೆಗಾಸಸ್ ಬಳಸಿ ಪ್ರಖ್ಯಾತರು, ರಾಜಕಾರಣಿಗಳು ಮತ್ತು ಲೇಖಕರ ಮೇಲೆ ಸರ್ಕಾರಿ ಸಂಸ್ಥೆಗಳನ್ನು ಕಣ್ಗಾವಲಿನಲ್ಲಿಟ್ಟಿದ್ದಾರೆ ಎಂಬ ಆರೋಪದ ಬಗ್ಗೆ ಹಿರಿಯ ಪತ್ರಕರ್ತರಾದ ಎನ್ ರಾಮ್ ಮತ್ತು ಸಶಿ ಕುಮಾರ್ ಅವರು ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

- Advertisement -

ಮುಂದಿನ ಕೆಲವು ದಿನಗಳಲ್ಲಿ ಈ ಅರ್ಜಿಯು ವಿಚಾರಣೆಗೆ ಬರುವ ಸಾಧ್ಯತೆಯಿದೆ. ಪೆಗಾಸೆಸ್ ಸ್ಪೈವೇರ್ ಬಳಸಿ ಫೋನ್ ಗಳಿಗೆ ಅಕ್ರಮವಾಗಿ ಹ್ಯಾಕಿಂಗ್ ಮಾಡುವುದರಿಂದ ಭಾರತದಲ್ಲಿ ಮುಕ್ತ ಮಾತುಕತೆಗೆ ಮತ್ತು ವೈಚಾರಿಕತೆ ಭಿನ್ನಾಭಿಪ್ರಾಯದ ಕುರಿತು ಅಭಿಪ್ರಾಯ ವ್ಯಕ್ತಪಡಿಸುವುದನ್ನು ತಡೆಯಲಿದೆ. ಈ ಮೂಲಕ ಅಭಿವ್ಯಕ್ತ ಸ್ವಾತಂತ್ರವನ್ನು ತಡೆಯಲು ಏಜೆನ್ಸಿ ಮತ್ತು ಸಂಸ್ಥೆಗಳು ಪ್ರಯತ್ನ ಮಾಡುತ್ತಿರುವ ಕುರಿತು ಸ್ವತಂತ್ರ ತನಿಖೆ ನಡೆಸಬೇಕಾಗಿದೆ.

ಸರ್ಕಾರ ಅಥವಾ ಅದರ ಎಜೆನ್ಸಿಗಳು ಸ್ಪೈವೇರ್ ಗಾಗಿ ಪರವಾನಿಗೆ ಪಡೆದಿದೆ ಮತ್ತು ಅದನ್ನು ಯಾವುದೇ ರೀತಿಯಲ್ಲಿ ಕಣ್ಗಾವಲು ನಡೆಸಲು ನೇರ ಅಥವಾ ಪರೋಕ್ಷವಾಗಿ ಬಳಸುತ್ತಿದೆಯೇ ಎಂದು ಬಹಿರಂಗಪಡಿಸಲು ಕೇಂದ್ರಕ್ಕೆ ನಿರ್ದೇಶಿಸಲು ಪತ್ರಕರ್ತರು ಕೋರಿದ್ದಾರೆ.

- Advertisement -

ಸ್ಪೈವೇರ್ ಮೂಲಕ ಭಾರತದ ವಿರೋಧ ಪಕ್ಷದ ರಾಜಕಾರಣಿ, ಸಾಂವಿಧಾನಿಕ ಕಾರ್ಯಕರ್ತರು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರು, ವಕೀಲರು, ಸರ್ಕಾರಿ ಮಂತ್ರಿಗಳು ಸೇರಿದಂತೆ 142 ಕ್ಕೂ ಹೆಚ್ಚಿನ ಭಾರತೀಯರ ಮೊಬೈಲ್ ಅನ್ನು ಕದ್ದಾಲಿಕೆ ನಡೆಸಿದ ಹಿನ್ನೆಲೆಯಲ್ಲಿ ಸುಪ್ರೀಮ್ ಕೋರ್ಟ್ ಗೆ ಹೋಗುವ ಕುರಿತು ತೀರ್ಮಾನಿಸಲಾಗಿದೆಯೆಂದು ಅರ್ಜಿದಾರದು ತಿಳಿಸಿದ್ದಾರೆ. ಈ ಹಿಂದೆ ವಕೀಲರು ಈ ಕುರಿತು ತನಿಖೆ ನಡೆಸುವಂತೆ ಕೋರಿ ಸುಪ್ರೀಮ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

Join Whatsapp