ವಿಚಾರಣೆ ಬಳಿಕ ರಮೇಶ್ ಜಾರಕಿಹೊಳಿ ಬಂಧನ ? ಎರಡು ಗಂಟೆಗಳಿಂದ ನಡೆಯುತ್ತಿದೆ ವಿಚಾರಣೆ !

Prasthutha|

► ಪೊಲೀಸರಿಂದ ಬಿಗಿ ಭದ್ರತೆ

- Advertisement -

ಬೆಂಗಳೂರು : ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ರಮೆಶ್ ಜಾರಕಿಹೊಳಿ ಯುವತಿಯೊಂದಿಗಿದ್ದ ಸಿಡಿ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಯುವತಿ ತನ್ನ ವಕೀಲರ ಮೂಲಕ ದೂರು ಅಧಿಕೃತವಾಗಿ ದೂರು ಸಲ್ಲಿಸಿದ್ದಳು. ಇಂದು ಬೆಳಗ್ಗೆ  11 ಗಂಟೆಯಿಂದ ಸತತ ಎರಡು ಗಂಟೆಗಳಿಂದ ಕಬ್ಬನ್ ಪಾರ್ಕ್ ಪೊಲೀಸರಿಂದ ರಮೇಶ್ ಜಾರಕಿಹೊಳಿ  ಅವರು ವಿಚಾರಣೆಗೆ ಒಳಪಟ್ಟಿದ್ದಾರೆ. ಇನ್ಸ್ಪೆಕ್ಟರ್ ಮಾರುತಿ ಅವರು ಜಾರಕಿಹೊಳಿ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಯುವತಿಯು ಅತ್ಯಾಚಾರ ಮತ್ತು ಜೀವ ಬೆದರಿಕೆ ಇದೆಯೆಂಬ ಹಿನ್ನೆಲೆಯಲ್ಲಿ ದೂರು ನೀಡಿದ ಬಳಿಕ ರಮೇಶ್ ಜಾರಕಿಹೊಳಿ ಅವರ ಬಂಧನಕ್ಕೆ ತೀವ್ರ ಒತ್ತಡ ಕೇಳಿ ಬಂದಿತ್ತು.

ಎಫ್ ಐ ಆರ್ ದಾಖಲಾದ ಬಳಿಕವೂ ಪೊಲೀಸರು ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸದೇ ಇರುವ ಬಗ್ಗೆ ವಿಪಕ್ಷಗಳು ಕಿಡಿ ಕಾರಿದ್ದವು. ಇದೀಗ ಕಬ್ಬನ್ ಪಾರ್ಕ್ ಪೊಲೀಸರು ಜಾರಕಿಹೊಳಿ ಅವರನು ವಿವಿಧ ಆಯಾಮಗಳಿಂದ ಪ್ರಶ್ನೆಗಳನ್ನು ಕೇಳುತಿದ್ದು, ವಿಚಾರಣೆಯ ಬಳಿಕ ಜಾರಕಿಹೊಳಿಯವರನ್ನು ಬಂಧಿಸಲಿದ್ದಾರೆ ಎಂಬ ಊಹಾಪೋಹ ಕೇಳಿ ಬಂದಿದೆ.  ಇದಕ್ಕೆ ಪೂರಕವಾಗಿ ಪೊಲೀಸ್ ಠಾಣೆ ಮತ್ತು ಕೋರಮಂಗಲ ಟೆಕ್ನಿಕಲ್ ವಿಂಗ್ ಬಳಿ ಬಿಗಿ ಪೊಲೀ ಭದ್ರತೆ ಒದಗಿಸಲಾಗಿದೆ. ಮೂರು ಇನ್ಸ್ಪೆಕ್ಟರ್ ಶ್ರೇಣಿಯ ಹಾಗೂ 30 ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲು ಹಾಕಲಾಗಿದೆ.

- Advertisement -

ರಮೇಶ್ ಬಂಧನದ ಬಳಿಕ ನಡೆಯುವ ಘಟನಾವಳಿಗಳನ್ನು ಎದುರಿಸಲು ಭದ್ರತೆ ಒದಗಿಸಲಾಗಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಕಬ್ಬನ್ ಪಾರ್ಕ್ ಪೊಲೀಸರ ವಿಚಾರಣೆ ಮುಗಿದ ಬಳಿಕ ಅಧಿಕೃತವಾಗಿ ಈ ಕುರಿತು ಮಾಹಿತಿ ಬಹಿರಂಗವಾಗಲಿದೆ ಎನ್ನಲಾಗಿದೆ.



Join Whatsapp