ದೇವಸ್ಥಾನದಂತೆ ಮಾರ್ಪಾಟಾದ ಉತ್ತರ ಪ್ರದೇಶದ ಪೊಲೀಸ್ ಠಾಣೆ !

Prasthutha|

ಮೀರತ್ : ಉತ್ತರಪ್ರದೇಶದ ಪೊಲೀಸ್ ಠಾಣೆಯೊಂದನ್ನು ದೇವಸ್ಥಾನದಂತೆ ಮಾರ್ಪಾಟು ಮಾಡಿರುವ ವೀಡಿಯೋ ಒಂದು ವೈರಲಾಗುತ್ತಿದೆ. ಮೀರತ್ ಜಿಲ್ಲೆಯ ನೌಚಂಡಿ ಪೊಲೀಸ್ ಠಾಣೆಯ ಈ ದೃಶ್ಯಗಳನ್ನು ನೋಡುವಾಗ ದೇವಸ್ಥಾನಗಳಂತೆಯೇ ಕಾಣುತ್ತಿದೆ. ಗಣೇಶನ ವಿಗ್ರಹ ಮತ್ತು ದೇವತೆಗಳ ಚಿತ್ರಗಳನ್ನು ಅಳವಡಿಸಲಾದ ಸ್ಟೇಷನ್ ಹೌಸ್ ಕಚೇರಿಯಲ್ಲಿ ಗಂಗಾ ಜಲವನ್ನು ಬಳಸಿ ಪೂಜೆಯನ್ನು ಮಾಡುವ ದೃಶ್ಯಗಳನ್ನೂ ವೀಡಿಯೋದಲ್ಲಿ ಕಾಣಬಹುದು.

- Advertisement -

ಸ್ಟೇಷನ್ ಹೌಸ್ ಆಫೀಸರ್ ಪ್ರೇಮ್ ಚಂದ್ ಶರ್ಮಾ ಅವರು ಗಂಗಾ ಜಲವನ್ನು ಆಫೀಸ್ ಟೇಬಲ್ ಮೇಲೆ ಇಟ್ಟು ಪೂಜಿಸುವುದನ್ನೂ ವೀಡಿಯೋದಲ್ಲಿ ಕಾಣಬಹುದು. ಕಚೇರಿಯ ಗೋಡೆಯ ಮೇಲೆ ಪೂಜಾ ಕೋಣೆಯನ್ನು ಹೋಲುವಂತೆ ಅನೇಕ ಹಿಂದೂ ದೇವತೆಗಳ ಚಿತ್ರಗಳಿವೆ. ಅದರ ಕೆಳಗೆ, ಗಣೇಶನ ವಿಗ್ರಹವನ್ನು ವಿಶೇಷವಾಗಿ ಸ್ಥಾಪಿಸಲಾದ ಮೇಜಿನ ಮೇಲೆ ಇಡಲಾಗಿದೆ. ಹೋಳಿ ಆಚರಣೆಯ ಅಂಗವಾಗಿ ಎಸ್‌ಎಚ್‌ಒ ಪ್ರೇಮ್ ಚಂದ್ ಅವರು ಪೊಲೀಸ್ ಠಾಣೆಯಲ್ಲಿ ವಿಶೇಷ ಪೂಜೆಯನ್ನೂ ನಡೆಸುತ್ತಾರೆ. ಮಂತ್ರಗಳನ್ನು ಪಠಿಸಿ ಗಂಗಾ ನೀರನ್ನು ಸಂದರ್ಶಕರಿಗೆ ನೀಡುವ ವೀಡಿಯೊವನ್ನು ಉತ್ತರ ಪ್ರದೇಶದ ಪತ್ರಕರ್ತ ಪಿಯೂಷ್ ರಾಯ್ ಟ್ವೀಟ್ ಮಾಡಿದ್ದಾರೆ.

Join Whatsapp