ರಾಮನಾಥಪುರ-ಕೊಣನೂರು ಮಧ್ಯದ ರಸ್ತೆ ಕುಸಿತ

Prasthutha|

ಕೊಣನೂರು : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ರಾಮನಾಥಪುರ-ಕೊಣನೂರು ರಸ್ತೆಯ ವಡವಾಣಹೊಸಹಳ್ಳಿ ಗ್ರಾಮದ ಬಳಿ ನೂತನವಾಗಿ ಸೇತುವೆ ನಿರ್ಮಿಸುತ್ತಿರುವ ಸ್ಥಳದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ ಕುಸಿದಿದೆ.

- Advertisement -

ಕಳೆದ ಎರಡು ದಿನದ ಹಿಂದೆ ನೀರು ಹರಿಯುತ್ತಿರುವ ಸಲುವಾಗಿ ಹಾಗೂ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆಯು ಭಾರೀ ವಾಹನಗಳ ಓಡಾಟದಿಂದ ಕುಸಿಯುವ ಸ್ಥಿತಿ ಇರುವುದರಿಂದ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಿದ್ದರಿಂದ ಗುರುವಾರ ರಾತ್ರಿ ರಸ್ತೆ ಕುಸಿದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಸ್ಥಳದಲ್ಲಿ ನೀರಿನ ಹರಿವು ಕಡಿಮೆಯಾಗುವವರೆಗೂ ರಸ್ತೆ ನಿರ್ಮಿಸಲು ಸಾಧ್ಯವಿಲ್ಲ ಹಾಗಾಗಿ ಕೊಣನೂರಿನಿಂದ ಅರಕಲಗೂಡಿಗೆ ತೆರಳುವ ವಾಹನ ಸವಾರರು ಕಬ್ಬಳಿಗೆರೆ ಮಾರ್ಗವಾಗಿ ಹಾಗೂ ರಾಮನಾಥಪುರ, ಬಸವಾಪಟ್ಟಣ, ಕೇರಳಾಪುರ ಮಾರ್ಗವಾಗಿ ಸಂಚರಿಸುವ ವಾಹನ ಪ್ರಯಾಣಿಕರು ಕೋನಾಪುರ, ಮುಗಳೂರು ಮಾರ್ಗವಾಗಿ ಹಾಗೂ ಮೈಸೂರು ತೆರಳುವ ವಾಹನ ಪ್ರಯಾಣಿಕರು ಕುಶಾಲನಗರ ಮಾರ್ಗವಾಗಿ ಸಂಚರಿಸಬೇಕು ಎಂದು ತಾಲೂಕು ಆಡಳಿತ ತಿಳಿಸಿದೆ.

ಈ ಮೊದಲು ಈ ರಸ್ತೆ ಸಂಚಾರ ಸ್ಥಗಿತಗೊಂಡಾಗ ಹಿರೇಹಳ್ಳಿ ಮಾರ್ಗವಾಗಿ ವಾಹನಗಳು ಚಲಿಸುತ್ತಿದ್ದವು ಆದರೆ ಹಿರೇಹಳ್ಳಿಯ ನಾಲೆಯ ಸೇತುವೆಯ ಮೇಲೂ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸಬಾರದು ಎಂದೂ ತಿಳಿಸಿದ್ದಾರೆ.

Join Whatsapp