ಕಲ್ಲಡ್ಕ ಪ್ರಭಾಕರ್ ಭಟ್ ನನ್ನು ಕೂಡಲೇ ಬಂಧಿಸಿ: ರಮಾನಾಥ್ ರೈ ಆಗ್ರಹ

Prasthutha|

ಮಂಗಳೂರು: ಮುಸ್ಲಿಂ ಮಹಿಳೆಯರ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಶ್ಲೀಲವಾಗಿ ಮಾತನಾಡಿದ್ದು, ಅವರನ್ನು ಕೂಡಲೇ ಬಂಧಿಸಿ ಎಂದು ಮಾಜಿ ಸಚಿವ ರಮಾನಾಥ್ ರೈ ಆಗ್ರಹಿಸಿದ್ದಾರೆ.

- Advertisement -

ಮಂಗಳೂರಿನಲ್ಲಿ ದ.ಕ ಜಾತ್ಯಾತೀತ ಪಕ್ಷಗಳ ಸಂಘಟನೆಗಳ ಜಂಟಿ ವೇದಿಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂತಹ ಹೇಳಿಕೆ ನಾಗರಿಕ ಸಮಾಜ ಒಪ್ಪಲು ಸಾಧ್ಯವೇ ಇಲ್ಲ, ಮುಸ್ಲಿಂ ಮಾತ್ರ ಅಲ್ಲ ಇದು ಮಹಿಳೆಯರಿಗೆ ಮಾಡಿದ ಅವಮಾನ. ಪ್ರಭಾಕರ್ ಭಟ್ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಇದನ್ನು ಸರಕಾರ ಗಮನಿಸಿ ಬಂಧಿಸಬೇಕು ಎಂದರು.

ಇದು ಕೇವಲ ಮುಸ್ಲಿಂ ಹೆಣ್ಮಕ್ಕಳಿಗೆ ಮಾತ್ರ ಅಲ್ಲ, ಹಿಂದೂ ಹೆಣ್ಮಕ್ಕಳ ಡ್ರೆಸ್ ಕೋಡ್ ಬಗ್ಗೆನೂ ಮಾತನಾಡುತ್ತಾರೆ. ಹಿಂದೂ ಹೆಣ್ಮಕ್ಕಳ ಅಪಮಾನ ಮಾಡೋ ಕೆಲಸವನ್ನು ಪ್ರಭಾಕರ್ ಭಟ್ ಮಾಡಿದ್ದಾರೆ. ಕ್ರೈಸ್ತ ಸಮುದಾಯವನ್ನು ಅವರು ಈ ರೀತಿ ಹಲವು ಬಾರಿ ಅಪಮಾನ ಮಾಡಿದ್ದಾರೆ. ಕೋಮು ದ್ವೇಷ ಹರಡಿಸಿ ರಾಜಕೀಯ ಲಾಭಕ್ಕಾಗಿ ಹೆಣ್ಮಕ್ಕಳ ಮಾನ ಮರ್ಯಾದೆಗೆ ಕುಂದು ತಂದಿದ್ದಾರೆ ಎಂದು ಹೇಳಿದ್ದಾರೆ. ಪ್ರಭಾಕರ್ ಭಟ್ಟರ ಹೇಳಿಕೆಯನ್ನು ತಿರುಚಲಾಗಿದೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಆದರೆ ಅದು ಯಾವ ರೀತಿ ತಿರುಚಿದ್ದಾರೆ ಎಂದು ಅವರೇ ಹೇಳಲಿ ಎಂದು ರಮಾನಾಥ ರೈ ಸವಾಲು ಹಾಕಿದ್ದಾರೆ.



Join Whatsapp