ಮಂಗಳೂರು | ಸೂರ್ಯ- ಚಂದ್ರರು ಇರುವವರೆಗೂ ಕಾಂಗ್ರೆಸ್ ಪಕ್ಷ ಶಾಶ್ವತವಾಗಿರುತ್ತದೆ: ಹರೀಶ್ ಕುಮಾರ್

Prasthutha|

ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ

- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭನನದಲ್ಲಿ ನೆರವೇರಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ ಹರೀಶ್ ಕುಮಾರ್, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಬಾಪೂಜಿ ಅವರೊಂದಿಗೆ ಸೇರಿಕೊಂಡು ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂಬ ಸಂಸ್ಥೆ ಪ್ರಾರಂಭವಾಯಿತು. ದೇಶದ ಉದ್ದಗಲಕ್ಕೂ ಪ್ರತಿಯೊಂದು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಹೊಂದಿದ ಏಕೈಕ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಚುನಾವಣೆಯಲ್ಲಿ ಸೋತರೂ ಗೆದ್ದರೂ ದೃಢ ಸಂಕಲ್ಪದಲ್ಲಿರುವ ಕಾರ್ಯಕರ್ತರನ್ನು ಹೊಂದಿದ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.

- Advertisement -

ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷವಾದ್ದರಿಂದ ಸೂರ್ಯ- ಚಂದ್ರರು ಇರುವವರೆಗೂ ಕಾಂಗ್ರೆಸ್ ಪಕ್ಷ ಶಾಶ್ವತವಾಗಿರುತ್ತದೆ, ಯಾರಿಂದಲೂ ಅದನ್ನು ನಿರ್ನಾಮ ಮಾಡಲು ಅಸಾಧ್ಯ ಎಂದು ಹರೀಶ್ ಕುಮಾರ್ ಹೇಳಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವರಾದ ರಮಾನಾಥ್ ರೈ, ಸ್ವಾತಂತ್ರ್ಯಕ್ಕೆ ಬಹಳಷ್ಟು ಹೋರಾಟ ಮಾಡಿ ಇತಿಹಾಸ ನಿರ್ಮಿಸಿದ ಪಕ್ಷ ಕಾಂಗ್ರೆಸ್, ಆದರೆ ಈಗ ಇತಿಹಾಸವನ್ನು ತಿರುಚಲಾಗುತ್ತಿದೆ. ಜನರಿಗೆ ತಪ್ಪು ಮಾಹಿತಿ ನೀಡಿ ಜನರನ್ನು ತಪ್ಪು ಭಾವನೆಗೆ ತಲುಪಿಸುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡಬಾರದು. ನೈಜ ಇತಿಹಾಸವನ್ನು ಅರಿಯಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಂಖಡರಾದ ಪಿ.ವಿ ಮೋಹನ್, ಶಕುಂತಳಾ ಶೆಟ್ಟಿ ಆರ್. ಪದ್ಮರಾಜ್, ಕೃಪಾ ಅಮರ್ ಆಳ್ವ, ಶಶಿಧರ್ ಹೆಗ್ಡೆ, ಮಾಹಬಲ ಮಾರ್ಲ, ಹರಿನಾಥ್.ಕೆ, ಶಾಹುಲ್ ಹಮಿದ್, ಶುಭೋದಯ ಆಳ್ವ, ಕವಿತಾ ಸನಿಲ್, ನೀರಜ್ ಚಂದ್ರಪಾಲ್, ಪ್ರವೀಣ್ ಚಂದ್ರ ಆಳ್ವ, ಶಬೀರ್.ಎಸ್., ಬಿ.ಎಂ ಅಬ್ಬಾಸ್ ಅಲಿ, ಸಂಶುದ್ದೀನ್ ಕುದ್ರೋಳಿ, ಶಮೀರ್ ಪಜೀರ್, ಪೂರ್ಣೇಶ್ ಭಂಡಾರಿ, ಸುಹಾನ್ ಆಳ್ವ, ಅಶೋಕ್ ಡಿ.ಕೆ, ಝೀನತ್ತ್ ಸಂಶುದ್ದೀನ್ ಬಂದರ್, ಯೊಗೀಶ್ ಕುಮಾರ್, ವಿಶ್ವನಾಥ್ ಬಜಾಲ್, ಶಶಿಕಲಾ ಪದ್ಮನಾಭ, ನಾಗೇಶ್ ತೊಕ್ಕೊಟ್ಟು, ಝೊಬೈರ್ ತಲಮೊಗರು ಮೊದಲಾದವರು ಉಪಸ್ಥಿತರಿದ್ದರು. ಸೇವಾದಳದ ಜಿಲ್ಲಾ ಮುಖ್ಯಸ್ಥರಾದ ಜೋಕಿಮ್ ಡಿ ಸೋಜಾ ಸ್ವಾಗತಿಸಿ ಕೊನೆಗೆ ವಂದಿಸಿದರು.

Join Whatsapp