ರಾಮ ಮಂದಿರ| ಮುಸ್ಲಿಮರಿಂದ ಆಕ್ಷೇಪ ಇಲ್ಲ; ವಿಪಕ್ಷಗಳು ರಾಮನ ವಿರುದ್ಧ ತಿರುಗಿಬಿದ್ದಿವೆ: ಶಹನವಾಝ್ ಹುಸೇನ್‌

Prasthutha|

ಲಖನೌ: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಮುಸ್ಲಿಮರಿಂದ ಯಾವುದೇ ನಕಾರಾತ್ಮಕ ಹೇಳಿಕೆ ಬಂದಿಲ್ಲ. ಆದರೆ ವಿರೋಧ ಪಕ್ಷಗಳು ಶ್ರೀರಾಮನ ವಿರುದ್ಧವೂ ತಿರುಗಿ ಬಿದ್ದಿವೆ. ಇದಕ್ಕೆ ಚುನಾವಣೆಯಲ್ಲಿ ದೇಶದ ಜನತೆ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ನಾಯಕ, ಕೇಂದ್ರ ಮಾಜಿ ಸಚಿವ ಸೈಯದ್‌ ಶಹನವಾಝ್ ಹುಸೇನ್‌ ಹೇಳಿದ್ದಾರೆ.

- Advertisement -

ಬಾಲಿಯಾದ ಸಿಕಂದರ್‌ಪುರದಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ‘ರಾಮ ಮಂದಿರ ನಿರ್ಮಾಣವು ಪೂರ್ವಾಂಚಲ್‌ನ ಸಂಪೂರ್ಣ ಚಿತ್ರಣವನ್ನು ಬದಲಾಯಿಸುತ್ತದೆ. ಜನವರಿ 22ರಂದು ದೇವಸ್ಥಾನ ಉದ್ಘಾಟನೆಯಾಗಲಿದೆ. ದೇವಾಲಯ ಹಾಗೂ ಶ್ರೀರಾಮನ ದರ್ಶನವನ್ನು ಪಡೆಯಲು ದೇಶ ಮತ್ತು ವಿದೇಶಗಳಿಂದ ಜನರು ಆಗಮಿಸುತ್ತಾರೆ ಮತ್ತು ಎಂದಿಗೂ ಜನಸಂದಣಿ ಕಡಿಮೆಯಾಗುವುದಿಲ್ಲ. ಅಂತಹ ಅದ್ಭುತವಾದ ದೇವಾಲಯವನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌, ಆರ್‌ಜೆಡಿ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ಇತರ ಪಕ್ಷಗಳು ರಾಮಮಂದಿರದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿವೆ. ‘ಇಂಡಿಯಾ’ ಮೈತ್ರಿಕೂಟವು ಸಂಪೂರ್ಣವಾಗಿ ವಿಭಜನೆಯಾಗಲಿದೆ. ರಾಮ ಮಂದಿರದ ವಿಚಾರದಲ್ಲಿ ವಿರೋಧ ಪಕ್ಷಗಳಿಗಿರುವ ಕಷ್ಟವೆನೆಂದರೆ ಅದನ್ನು ನುಂಗಬೇಕೋ ಅಥವಾ ಉಗುಳಬೇಕೋ ಎಂದು ಅವುಗಳಿಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

- Advertisement -

Join Whatsapp