ಮಧ್ಯ ಪ್ರದೇಶ | ಖಾರ್ಗೋನ್ ಹಿಂಸಾಚಾರ; ಕರ್ಫ್ಯೂ ಹಿಂಪಡೆದ ಜಿಲ್ಲಾಡಳಿತ

Prasthutha|

ಭೋಪಾಲ್: ರಾಮನವಮಿ ಹೆಸರಿನಲ್ಲಿ ಸಂಘಪರಿವಾರ ನಡೆಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಖಾರ್ಗೋನ್ ನಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಹಿಂಪಡೆಯಲಾಗಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮಿಲಿಂದ್ ಧೋಕೆ ತಿಳಿಸಿದ್ದಾರೆ.

- Advertisement -

ಈ ಕುರಿತು ಮಾತನಾಡಿದ ಅವರು, ಈ ಸಂಬಂಧ ಸ್ಥಳೀಯಾಡಳಿತ ಶಾಂತಿ ಸಭೆಯನ್ನು ನಡೆಸಿದ್ದು, ಎಲ್ಲಾ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಒಮ್ಮತದ ನಿರ್ಧಾರದೊಂದಿಗೆ ಕಳೆದ ತಿಂಗಳು 10 ರಂದು ಹೇರಲಾಗಿದ್ದ ನಿರ್ಬಂಧ ಮತ್ತು ಕರ್ಫ್ಯೂವನ್ನು ಹಿಂಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ತಿಂಗಳು 10 ರಂದು ರಾಮನವಮಿ ವೇಳೆ ಸಂಘಪರಿವಾರ ಗಲಭೆ ನಡೆಸಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ 24 ದಿನಗಳ ಕಾಲ ಕರ್ಫ್ಯೂ ಹೇರಲಾಗಿತ್ತು. ಇದೀಗ ಬುಧವಾರ ಸಂಜೆಯಿಂದ ಜಾರಿಗೆ ಬರುವಂತೆ ಕರ್ಫ್ಯೂ ಹಿಂಪಡೆಯಲಾಗಿದೆ ಎಂದು ಮಿಲಿಂದ್ ತಿಳಿಸಿದ್ದಾರೆ.

Join Whatsapp