ರಾಮ ಮಂದಿರಕ್ಕೆ ಪೌರ ಕಾರ್ಮಿಕರಿಂದ ಬಲವಂತದ ದೇಣಿಗೆ ಸಂಗ್ರಹ | ದಿಢೀರ್ ಪ್ರತಿಭಟನೆ

Prasthutha|

ಶಹಜಹಾನ್ ಪುರ : ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರಕ್ಕೆ ಪ್ರತಿಯೊಬ್ಬ ಪೌರ ಕಾರ್ಮಿಕ ಕಡ್ಡಾಯವಾಗಿ 100 ರೂ. ದೇಣಿಗೆ ನೀಡಬೇಕು ಎಂದು ಅಧಿಕಾರಿಗಳು ಒತ್ತಡ ಮಾಡಿದ್ದಾರೆ ಎಂದು ಆಪಾದಿಸಿ, ಪೌರ ಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಜಲಾಲಾಬಾದ್ ನಗರಪಾಲಿಕೆಯ ನೈರ್ಮಲ್ಯ ಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿ, ತಮ್ಮಿಂದ ಒತ್ತಾಯಪೂರ್ವಕವಾಗಿ ದೇಣಿಗೆ ಸಂಗ್ರಹಿಸುತ್ತಿರುವುದಕ್ಕೆ ಆಕ್ಷೇಪಿಸಿದ್ದಾರೆ.

- Advertisement -

ದೇಣಿಗೆ ನೀಡದ ಕಾರ್ಮಿಕರನ್ನು ಕೆಲಸಕ್ಕೆ ಗೈರುಹಾಜರು ಎಂದು ಪರಿಗಣಿಸುವುದಾಗಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ನೈರ್ಮಲ್ಯ ಕಾರ್ಮಿಕ ಮುಖಂಡ ಪ್ರೇಮ್ ಪ್ರಕಾಶ್ ವಾಲ್ಮೀಕಿ ಆಪಾದಿಸಿದ್ದಾರೆ. ನೈರ್ಮಲ್ಯ ಕಾರ್ಮಿಕರ ವೇತನ ತೀರಾ ಕಡಿಮೆ ಇರುವ ಕಾರಣ ದೇಣಿಗೆ ನೀಡುವ ಸ್ಥಿತಿಯಲ್ಲಿ ಕಾರ್ಮಿಕರು ಇಲ್ಲ ಎಂದು ಅವರು ಹೇಳಿದ್ದಾರೆ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಲಿಕೆ ಕಾರ್ಯ ನಿರ್ವಹಣಾಧಿಕಾರಿ ದಯಾಶಂಕರ್ ವರ್ಮಾ, ದೇಣಿಗೆ ನೀಡಬೇಕೇ ಬೇಡವೇ ಎನ್ನುವುದು ಅವರ ವೈಯಕ್ತಿಕ ವಿಚಾರ. ಸರಕಾರಿ ಮಟ್ಟದಲ್ಲಿ ಯಾವುದೇ ದೇಣಿಗೆ ಕೇಳಿಲ್ಲ ಎಂದಿದ್ದಾರೆ. ಕೆಲಸಕ್ಕೆ ಹಾಜರಾದ ಎಲ್ಲ ಕಾರ್ಮಿಕರಿಗೂ ಹಾಜರಾತಿ ನೀಡಲಾಗಿದೆ ಎಂದು ಹೇಳಿದ್ದಾರೆ.  



Join Whatsapp