January 22, 2021
ಭಾರತದ ಫೇಸ್ ಬುಕ್ ಬಳಕೆದಾರರ ದತ್ತಾಂಶ ಕಳವು | ಕೇಂಬ್ರಿಜ್ ಅನಾಲಿಟಿಕಾ ವಿರುದ್ಧ ಸಿಬಿಐ ಕೇಸ್ ದಾಖಲು

ನವದೆಹಲಿ : ಭಾರತದ ಫೇಸ್ ಬುಕ್ ಬಳಕೆದಾರರ ದತ್ತಾಂಶ ಕಾನೂನು ಬಾಹಿರವಾಗಿ ಸಂಗ್ರಹಿಸಿದ್ದ ಯುಕೆ ಮೂಲದ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಜ್ ಅನಾಲಿಟಿಕಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಅಲ್ಲದೆ, ಗ್ಲೋಬಲ್ ಸೈನ್ಸ್ ರಿಸರ್ಚ್ ಸಂಸ್ಥೆಯನ್ನೂ ಪ್ರಕರಣದಲ್ಲಿ ಸಿಬಿಐ ಹೆಸರಿಸಿದೆ. ಗ್ಲೋಬಲ್ ಸೈನ್ಸ್ ರಿಸರ್ಚ್ ಕೂಡ ವಿದೇಶಿ ಸಂಸ್ಥೆಯಾಗಿದೆ.
ಫೇಸ್ ಬುಕ್ – ಕೇಂಬ್ರಿಜ್ ಅನಾಲಿಟಿಕಾ ದತ್ತಾಂಶ ಕಳವು ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ನಡೆಯಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಗ್ಲೋಬಲ್ ಸೈನ್ಸ್ ರಿಸರ್ಚ್ ಸಂಸ್ಥೆ ಭಾರತದಲ್ಲಿ 5.62 ಲಕ್ಷ ಮಂದಿಯ ವೈಯಕ್ತಿಕ ದತ್ತಾಂಶ ಸಂಗ್ರಹಿಸಿದೆ ಮತ್ತು ಅದನ್ನು ಕೇಂಬ್ರಿಜ್ ಅನಾಲಿಟಿಕಾಗೆ ನೀಡಿದೆ. ಆ ದತ್ತಾಂಶವನ್ನು ಬಳಸಿಕೊಂಡು, ಗೂಗಲ್ ಅನಾಲಿಟಿಕಾ ಸಂಸ್ಥೆ ಭಾರತದ ಚುನಾವಣೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದೆ ಎಂದು ಹೇಳಲಾಗಿದೆ.