ಕ್ರಿಸ್ಮಸ್ ಅಂಗವಾಗಿ ಶೀ ಫಾರ್ ಸೊಸೈಟಿಯಿಂದ ಸಂತಾ ಕ್ಲಾಸ್ ಪೋಷಾಕು ತೊಟ್ಟ 100 ಮಂದಿ ಮಹಿಳಾ ಬೈಕರ್ಸ್ ಗಳ ರ‍್ಯಾಲಿ

Prasthutha|

ಬೆಂಗಳೂರು, ಡಿ, 25; ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಬೈಕರ್ಸ್ ಗಳನ್ನೊಂಡ ಮಹಿಳಾ ಸಂಘಟನೆ ಶೀ ಫಾರ್ ಸೊಸೈಟಿ ಮತ್ತು ಟಸ್ಕರ್ ಹರ್ಲಿ ವೋನರ್ಸ್ ಗ್ರೂಪ್ ನಿಂದ ಸಂತಾ  ಕ್ಲಾಸ್ ಪೋಷಾಕು ತೊಟ್ಟು ಮಹಿಳೆಯರು ನಗರದಲ್ಲಿಂದು ಬೃಹತ್ ಬೈಕ್ ಜಾಥ ನಡೆಸಿದರು.

- Advertisement -

 ಸೇನಾ ಯೋಧರ ಮಕ್ಕಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸಲು ಆಯೋಜಿಸಿದ್ದ ಬೈಕ್ ರಾಲಿ ಆಕರ್ಷಣೀಯವಾಗಿತ್ತು. 100 ಮಂದಿ ಮಹಿಳೆಯರು ರಂಗು ರಂಗಿನ ಸಂತಾ ಕ್ಲಾಸ್ ವೇಷ ತೊಟ್ಟು ಬೈಕ್ ನಲ್ಲಿ ಸಂಚರಿಸಿ ಗಮನ ಸೆಳೆದರು.

 ಶೀಫಾರ್ ಸೊಸೈಟಿ ಸಂಸ್ಥಾಪಕ ಸದಸ್ಯರಾದ ಹರ್ಷಿಣಿ ವೆಂಕಟೇಶ್, ವಿದ್ಯಾ ಮಂಜುನಾಥ್, ಶಾಲಿನಿ ದೀಪಕ್, ಕವಿತಾ ಪ್ರಭಾಕರ್ ನೇತೃತ್ವದ ತಂಡದ ಬೈಕ್ ರಾಲಿಗೆ ನಗರದ ಚಾನ್ಸರಿ ಪೆವಿಲಿಯನ್ ನ ಬಳಿ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಚಾಲನೆ ನೀಡಿದರು.  ಚಾನ್ಸರಿ ಪೆವಲಿಯನ್ ಹೋಟೆಲ್ ನಿರ್ದೇಶಕರಾದ ಭಾಸ್ಕರ್ ರಾಜುರವರಿಂದ ಚಾಲನೆ.

- Advertisement -

 ಬಳಿಕ ಬೈಕರ್ಸ್ ಗಳು ಚಾನ್ಸರಿ ಪೆವಲಿಯನ್ ಹೋಟೆಲ್ ಮುಂಭಾಗದಿಂದ ರೆಸಿಡೆನ್ಸಿ ರಸ್ತೆ, ಮೆಯೋ ಹಾಲ್, ಎಂ.ಜಿ. ರಸ್ತೆ, ವಿಧಾನಸೌಧ, ನೃತತುಂಗ ರಸ್ತೆ, ಹಡ್ಸನ್ ಸರ್ಕಲ್, ಕಂಠೀರವ ಸ್ಟೇಡಿಯಂ, ಮಲ್ಯ ಆಸ್ಪತ್ರೆ ಮೂಲಕ

ಮತ್ತೆ ಚಾನ್ಸರಿ ಪೆವಿಲಿಯನ್ ಹೋಟೆಲ್ ಬಳಿ ಸಮಾಪ್ತಿಗೊಂಡಿತು,

ಮಹಿಳಾ ಬೈಕರ್ಸ್ ಗಳ ಸಂಘಟನೆಯಾದ ಶೀ ಫಾರ್ ಸೊಸೈಟಿ ಸೇನಾ ಯೋಧರ ಮಕ್ಕಳಿಗೆ ಶಿಕ್ಷಣ ನೀಡುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕೋಲಾರ ಜಿಲ್ಲೆಯ ಎರಡು ಗ್ರಾಮಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಜತೆಗೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಗಳನ್ನು ಒದಗಿಸುತ್ತಿದೆ. ಈ ಗ್ರಾಮಗಳ 200 ಕುಟುಂಬಗಳಿಗೆ ಶೀ ಫಾರ್ ಸೊಸೈಟಿಯಿಂದ ಸೋಲಾರ್ ಪೆನಲ್ ಗಳ ಕಿಟ್ ಗಳನ್ನು ಶೀ ಫಾರ್ ಸಂಘಟನೆ ಒದಗಿಸಿದೆ. ಸ್ಪರ್ಶ ಫೌಂಡೇಷನ್ ಮತ್ತು ಇನ್ನರ್ ವೀಲ್ ಕ್ಲಬ್ ಆಫ್ ಬೆಂಗಳೂರು ,ಇಕೆಬಾನ ಅಂತರಾಷ್ಟೀಯ ವಿಜಯಲಕ್ಷ್ಮೀ ಟೂರಿಸ್ಟ್ ಅಂಡ್ ಟೈಟಾನ್ ಸಂಸ್ಥೆಯವರು

 ವೈಸ್ ಮಾರ್ಷಲ್ ಬಿ.ಕೆ.ಮುರುಳಿರವರು ಪಾಲ್ಗೊಂಡಿದ್ದರು.

Join Whatsapp