ಕೋವಿಡ್: ಕ್ರಿಸ್ಮಸ್ ವಾರಾಂತ್ಯಕ್ಕೆ 4500 ವಿಮಾನಗಳು ರದ್ದು

Prasthutha|

ನ್ಯೂಯಾರ್ಕ್: ಕೋವಿಡ್ – 19 ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಸಿಬ್ಬಂದಿಗಳ ಕೊರತೆ ಎದುರಿಸಿದ ಕಾರಣ ವಿಶ್ವದಾದ್ಯಂತ ಸುಮಾರು 4500 ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಿವೆ.

- Advertisement -

ರೂಪಾಂತರಿ ಓಮಿಕ್ರಾನ್ ಹರಡುವಿಕೆಯ ಹಿನ್ನೆಲೆಯಲ್ಲಿ ಯುನೈಟೆಡ್ ಏರ್ ಲೈನ್ಸ್ ಕ್ರಿಸ್ ಮಸ್ ನಿಗದಿಪಡಿಸಿದ್ದ 100 ಕ್ಕೂ ಅಧಿಕ ವಿಮಾನಗಳನ್ನು ರದ್ದುಗೊಳಿಸಿರುವುದನ್ನು ದೃಢಪಡಿಸಿವೆ.

ಅಂಕಿಅಂಶಗಳ ಪ್ರಕಾರ ಇದುವರೆಗೆ 4604 ವಿಮಾನಗಳು ವಿಳಂಬವಾಗಿವೆ. ಶುಕ್ರವಾರ ಅಮೆರಿಕ ಮೂಲದ ಸುಮಾರು 500 ವಿಮಾನಗಳು ವಿಳಂಬವಾಗಿವೆ. ಅಲ್ಲದೆ, ಯುನೈಟೆಡ್ ಏರ್ಲೈನ್ಸ್, ಜೆಟ್ ಬ್ಲೂ, ಅಲಸ್ಕಾ ಏರ್ ಲೈನ್ಸ್ ಮತ್ತು ಡೆಲ್ಟಾ ಏರ್ಲೈನ್ಸ್ ಸೇರಿದಂತೆ ಹಲವು ಕಂಪೆನಿಗಳು ಕ್ರಿಸ್ಮಸ್ ನ ವೇಳೆ ವಿಮಾನಗಳನ್ನು ರದ್ದುಗೊಳಿಸಿವೆ.

Join Whatsapp