2012ರ ಕೇಸ್ ನಲ್ಲಿ ರೈತ ಮುಖಂಡ ಟಿಕಾಯತ್ ಬಂಧನ ಸಾಧ್ಯತೆ?

Prasthutha|

ನವದೆಹಲಿ : ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವವರಲ್ಲಿ ಪ್ರಮುಖರಾಗಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಸಿಂಗ್ ಟಿಕಾಯತ್ ರ ಬಂಧನದ ಸಾಧ್ಯತೆಗಳ ಬಗ್ಗೆ ವರದಿಯಾಗಿದೆ. ಮಾರ್ಚ್ 08 ರಂದು ಮಧ್ಯಪ್ರದೇಶದಲ್ಲಿ ಟಿಕಾಯತ್ ಬಂಧನ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

- Advertisement -

ಮಾ.8ರಂದು ಕೇಂದ್ರದ ಮೂರು ವಿವಾದಿತ ಕೃಷಿ ಕಾಯ್ದೆ ವಿರುದ್ಧದ ಆಂದೋಲನವು ಶಿಯೋಪರ್,ರೇವಾ ಮತ್ತು ದೆವಾಸ್ ನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಈ ಮುಂಚೆಯೇ ನಿರ್ಧರಿಸಲಾಗಿದೆ ಮತ್ತು ಟಿಕಾಯತ್ ಅಂದು ಸಭೆಯನ್ನುದ್ದೇಶಿಸಿ ಮಾತಾಡುವುದಕ್ಕೆ ಸಿದ್ಧತೆ ನಡೆಸಲಾಗಿದೆ. ಈ ನಡುವೆ, 2012ರ ಪ್ರಕರಣವೊಂದಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ನ್ಯಾಯಾಲಯವೊಂದು ವಾರೆಂಟ್ ಜಾರಿ ಮಾಡಿದೆ.

2012 ರಲ್ಲಿ ಟಿಕಾಯತ್ ಜೈಥಾರಿ ಪ್ರದೇಶದ ವಿದ್ಯುತ್ ಸ್ಥಾವರ ವಿರುದ್ಧ ಪ್ರತಿಭಟನೆ ನಡೆಸಿದ್ದು, ಅದು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿತ್ತು. ಈ ಹಿನ್ನಲೆಯಲ್ಲಿ ಟಿಕಾಯತ್ ಸೇರಿದಂತೆ 100 ಕ್ಕೂ ಹೆಚ್ಚು ಜನರನ್ನು ಐಪಿಸಿಯ ಸೆಕ್ಷನ್ 147 (ಗಲಭೆ), 148 (ಸಶಸ್ತ್ರ ಆಯುಧದಿಂದ ಗಲಭೆ), 149 (ಕಾನೂನುಬಾಹಿರ ಸಭೆ), 307 (ಕೊಲೆ ಯತ್ನ) ಯಡಿ ಆರೋಪ ದಾಖಲಾಗಿತ್ತು.

- Advertisement -

2012ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಟಿಕಾಯತ್ ಆ ಮೇಲೆ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗಿದ್ದಾರೆ. ಆದ್ದರಿಂದ ಈ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ ಎಂದು ಅನುಪುರ ಪೊಲೀಸ್ ವರಿಷ್ಠಾಧಿಕಾರಿ ಮಂಗಿಲಾಲ್ ಸೋಲಂಕಿ ಹೇಳಿದ್ದಾರೆ.



Join Whatsapp