ನವದೆಹಲಿ: ಇಲ್ಲಿನ ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ಟಾದ ಹುಲ್ಲುಹಾಸಿಗೆ ‘ಕರ್ತವ್ಯಪಥ್’ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಈ ನೂತನ ಪ್ರಕ್ರಿಯೆಗೆ ಈ ವಾರವೇ ದೆಹಲಿ ಮುನ್ಸಿಪಲ್ ಕೌನ್ಸಿಲ್‌ನಿಂದ ಅನುಮೋದನೆ ದೊರೆಯದೆ ಎಂದು ಮೂಲಗಳು ತಿಳಿಸಿವೆ. ವಸಾಹತುಶಾಹಿಗಳ ಸಂಕೇತಗಳನ್ನು ತೊಡೆದು ಹಾಕುವ ಪ್ರಧಾನ ಮಂತ್ರಿಯ ಯೋಜನೆಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಬ್ರಿಟೀಷ್ ಆಡಳಿತದ ಸಂದರ್ಭದಲ್ಲಿ ರಾಜರು ಸಂಚರಿಸುತ್ತಿದ್ದ ರಸ್ತೆ ಎಂಬ ನಿಟ್ಟಿನಲ್ಲಿ ರಾಜ್‌ಪಥ್ ಎಂದು ರೂಢಿಯಾಗಿದ್ದು, ಈ ಹೆಸರು ವಸಾಹತುಶಾಹಿಯ ಪಳೆಯುಳಿಕೆ ಎನ್ನಲಾಗುತ್ತಿದೆ.
ಸೆಂಟ್ರಲ್ ವಿಸ್ಟಾ ದೆಹಲಿ ರೈಸಿನಾ ಹಿಲ್‌ನಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಕೇಂದ್ರ ಸರಕಾರದ ಆಡಳಿತಾತ್ಮಕ ಕಚೇರಿಯಾಗಿದೆ.