ಜೈಪುರ್: ರಾಜ್ಯದ ಬಡವರಿಗೆ ತಲಾ 500 ರೂ.ಗಳ ದರದಲ್ಲಿ ಸಿಲಿಂಡರ್ ಗಳನ್ನು ಒದಗಿಸುವ ಯೋಜನೆಯನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಘೋಷಿಸಿದ್ದಾರೆ.
ಬಡವರಿಗೆ ಗರಿಷ್ಠ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರವು ನಿರಂತರವಾಗಿ ಸಾರ್ವಜನಿಕ ಕಲ್ಯಾಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಈ ದಿಶೆಯಲ್ಲಿ, ರಾಜ್ಯ ಸರ್ಕಾರವು ಈಗ ಬಡವರಿಗೆ ಕಡಿಮೆ ದರದಲ್ಲಿ ಎಲ್’ಪಿಜಿ ಸಿಲಿಂಡರ್’ಗಳನ್ನು ಒದಗಿಸುವ ಯೋಜನೆಯೊಂದಿಗೆ ಬರುತ್ತಿದೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
ಈ ಯೋಜನೆಯಡಿ, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳು ಹಾಗೂ ಉಜ್ವಲ ಯೋಜನೆಯ ಅಡಿಯಲ್ಲಿ ಬರುವವರು ತಲಾ 500 ರೂ.ಗಳ ದರದಲ್ಲಿ ವರ್ಷಕ್ಕೆ 12 ಸಿಲಿಂಡರ್’ಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.