ರಾಜಸ್ಥಾನ: SDPI, ಭಾರತೀಯ ಟ್ರೈಬಲ್ಸ್ ಪಕ್ಷ ಚುನಾವಣಾ ಪೂರ್ವ ಮೈತ್ರಿ

Prasthutha|

ಕೋಟಾ: 2023 ರಲ್ಲಿ ರಾಜಸ್ಥಾನ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ನಾಲ್ಕು ರಾಜಕೀಯ ಪಕ್ಷಗಳಾದ SDPI, ಭಾರತೀಯ ಟ್ರೈಬಲ್ಸ್ ಪಕ್ಷ (ಬಿಟಿಪಿ), ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾ (ಎಪಿಐ) ಮತ್ತು ರಾಜಸ್ಥಾನ ಡೆಮಾಕ್ರಟಿಕ್ ಫ್ರಂಟ್ (ಆರ್.ಡಿ.ಎಫ್) ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ ಎಂದು ಘೋಷಿಸಿವೆ.

- Advertisement -

ಈ ನಾಲ್ಕು ಪಕ್ಷಗಳು ರಾಜಸ್ಥಾನದಲ್ಲಿ ಕೆಳವರ್ಗದ ಜಾತಿ ಮತ್ತು ಸಮುದಾಯಗಳ ಒಟ್ಟಾರೆ ಅಭಿವೃದ್ಧಿಗೆ ಉತ್ತಮವಾದ ವೇದಿಕೆಯನ್ನು ಸಿದ್ಧಪಡಿಸಿದೆ. ಈ ಮೈತ್ರಿ ಸಹಜ ಮತ್ತು ಸಾವಯವವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯ ಅಡಿಪಾಯವನ್ನು ಅಲುಗಾಡಿಸಲಿದೆ ಎಂದು ಬಿಟಿಪಿ ರಾಜ್ಯಾಧ್ಯಕ್ಷ ವೇಲಾ ರಾಮ್ ಘೋಗ್ರಾ ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಬುಡಕಟ್ಟು ಜಿಲ್ಲೆಗಳಾದ ಬನ್ಸ್ವಾರ ಮತ್ತು ಡುಂಗರ್ ಪುರದಲ್ಲಿ BTP ಇಬ್ಬರು ಶಾಸಕರನ್ನು ಹೊಂದಿದ್ದು, ಕೋಟಾ ಮತ್ತು ಬರಾನ್ ನಲ್ಲಿ ಮುಸ್ಲಿಮ್ ಪ್ರಾಬಲ್ಯವಿರುವ ಪ್ರದೇಶದಲ್ಲಿ SDPI ಹಿಡಿತ ಸಾಧಿಸಿದೆ.

- Advertisement -

ಕೋಟಾ, ಬರಾನ್ ಮತ್ತು ಜೈಪುರದಲ್ಲಿ ದಲಿತ, ಬುಡುಕಟ್ಟು ಮತ್ತು ಹಿಂದುಳಿದ ಸಮುದಾಯದೊಂದಿಗೆ ಸೇರಿಕೊಂಡಿರುವುದು ನಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ರಿಝ್ವಾನ್ ಅಹ್ಮದ್ ತಿಳಿಸಿದ್ದಾರೆ.

ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾ ಎಂಬ ಪಕ್ಷವನ್ನು 2013 ರಲ್ಲಿ ಸ್ಥಾಪಿಸಲಾಗಿದ್ದು, ನಾಗ್ಪುರರಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ.



Join Whatsapp