ಮಂಗಳೂರಿನಲ್ಲಿ ಸ್ಮಾರ್ಟ್‌ ಸೈಕಲ್‌ ಟ್ರ್ಯಾಕ್

Prasthutha|

ಮಂಗಳೂರು : ನಗರದ ಪ್ರಮುಖ ರಸ್ತೆಗಳಲ್ಲಿನ ವಾಹನಗಳ ಭರಾಟೆಯಿಂದಾಗಿ ಸೈಕಲ್‌ ಸವಾರರಿಗೆ ಜಾಗವಿಲ್ಲದ ಪರಿಸ್ಥಿತಿ ಎದುರಾಗಿದೆ.  ಈ ಹಿನ್ನೆಲೆಯಲ್ಲಿ ನಗರದ ಎರಡು ಕಡೆಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಡೈರಕ್ಟರೇಟ್‌ ಆಫ್‌ ಅರ್ಬನ್‌ ಲ್ಯಾಂಡ್‌ ಟ್ರಾನ್ಸ್ ಪೋರ್ಟ್‌ ವತಿಯಿಂದ ಪ್ರತ್ಯೇಕ ಸುಸಜ್ಜಿತ ಸೈಕಲ್‌ ಟ್ರ್ಯಾಕ್ ನಿರ್ಮಾಣಕ್ಕೆ ಸರ್ವ ಸಿದ್ಧತೆ ನಡೆಸಲಾಗುತ್ತಿದೆ.

- Advertisement -

ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ನಿರ್ಮಾಣವಾಗುತ್ತಿರುವ ಸೈಕಲ್‌ ಟ್ರ್ಯಾಕ್‌ ವಿದ್ಯಾರ್ಥಿ ಸ್ನೇಹಿ ಯೋಜನೆಯಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮಂಗಳೂರಿನಲ್ಲಿ ಬಹುತೇಕ ಕಾಲೇಜು ಗಳಿವೆ. ಹೊರ ರಾಜ್ಯದ ಮತ್ತು ವಿದೇಶಿ ವಿದ್ಯಾರ್ಥಿ ಗಳು ಇಲ್ಲಿ ಕಲಿಯುತ್ತಿದ್ದಾರೆ. ಹೀಗಾಗಿ ಕಾಲೇಜು ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಸೈಕಲ್‌ ಪಥ ಯೋಜನೆಗೆ ಆದ್ಯತೆ ನೀಡಲಾಗಿದೆ.

ಮಂಗಳೂರು ನಗರವನ್ನು ಸೈಕಲ್‌ ಸ್ನೇಹಿಯಾಗಿಸುವ ಉದ್ದೇಶದಿಂದ ಸೈಕಲ್‌ ಟ್ರ್ಯಾಕ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು ಈಗಾಗಲೇ ಇದರ ಬಗ್ಗೆ ಎಲ್ಲ ಸಿದ್ಧತೆ ನಡೆಸಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆ ಆಗುತ್ತಿರುವ ನಗರದಲ್ಲಿ ಸೈಕಲ್‌ ಪಾಥ್‌ ಮೂಲಕ ಮತ್ತಷ್ಟು ಹೊಸತನ ನೀಡುವ ಆಶಯವಿದೆ. ನಗರದ ಓಣಿಗಳು ಮತ್ತು ರಸ್ತೆ ಬದಿಗಳಲ್ಲಿ ಟ್ರ್ಯಾಕ್ ಸಾಗಲಿದೆ. ಸದ್ಯ ಒಳಚರಂಡಿ, ರಸ್ತೆ ಕಾಮಗಾರಿ ಗೈಲ್‌ ಗ್ಯಾಸ್‌ ಕಾಮಗಾರಿ ನಡೆಯುತ್ತಿದ್ದು, ಅದಾದ ಕೂಡಲೇ ಸೈಕಲ್‌ ಟ್ರ್ಯಾಕ್ ನಿರ್ಮಾಣ ಆರಂಭವಾಗಲಿದೆ. ಮೂಲಗಳ ಪ್ರಕಾರ ಮಾರ್ಚ್‌ನ ಬಳಿಕ ಸೈಕಲ್‌ ಟ್ರ್ಯಾಕ್ ಯೋಜನೆ ಅನುಷ್ಠಾನಕ್ಕೆ ಬರುವ ನಿರೀಕ್ಷೆಯಿದೆ.

- Advertisement -

ಕೆಂಪು, ಹಳದಿ ಎಂಬ 2 ಪ್ರತ್ಯೇಕ ಪಥಗಳನ್ನು ನಿರ್ಮಿಸಲಾಗುತ್ತದೆ. ಕೆಂಪು ಪಥ ಸುಮಾರು 8 ಕಿ.ಮೀ. ಇರಲಿದ್ದು, ನಗರದ ಓಣಿ ರಸ್ತೆಗಳಲ್ಲಿ ಸಾಗಲಿದೆ. ಹಳದಿ ಪಥ ಸುಮಾರು 4 ಕಿ.ಮೀ. ಇರಲಿದ್ದು ರಸ್ತೆ ಬದಿಯಲ್ಲಿ ಸಾಗಲಿದೆ.

 ಉದ್ದೇಶಿತ ಸೈಕಲ್‌ ಟ್ರ್ಯಾಕ್ ರೂಟ್‌

ಬೋಳಾರ ಬೋಟ್‌ ರಿಪೇರ್‌ ಯಾರ್ಡ್‌ – ಕಾಸಿಯ ಸ್ಕೂಲ್‌ – ಮಣಿ ಪಾಲ್‌ ಸ್ಕೂಲ್‌ – ರೈಲು ನಿಲ್ದಾಣ – ಪುರಭವನ-ಸೆಂಟ್ರಲ್‌ ಮಾರುಕಟ್ಟೆ – ರಥಬೀದಿ ಹೂವಿನ ಮಾರುಕಟ್ಟೆ – ಬಿಇಎಂ ಶಾಲೆ – ಕೆನರಾ ಶಾಲೆ – ಶಾರದಾ ವಿದ್ಯಾಲಯ – ಕೆನರಾ ಕಾಲೇಜು – ಎಸ್‌ಡಿಎಂ ಕಾಲೇಜು – ಟಿಎಂಎ ಪೈ ಕನ್ವೆಂಷನ್ ಸೆಂಟರ್‌ – ಶ್ರೀ ದೇವಿ ಕಾಲೇಜು

ಮಾರ್ನಮಿಕಟ್ಟೆ ರೈಲ್ವೇ ಓವರ್‌ ಬ್ರಿಡ್ಜ್- ಸೈಂಟ್‌ ಜೋಸೆಫ್‌ ಕಾಲೇಜು – ರೋಶನಿ ನಿಲಯ – ಹೈಲ್ಯಾಂಡ್‌ ಕಾಫಿ ವರ್ಕ್‌-ತೆರಿಗೆ ಕಚೇರಿ.

Join Whatsapp