ಧಾರಾಕಾರ ಮಳೆಗೆ ಕೊಚ್ಚಿ ಹೋದ ಅಣೆಕಟ್ಟು; ವೀಡಿಯೋ ವೈರಲ್!

Prasthutha|

ಭೋಪಾಲ್: ಭಾರೀ ಮಳೆಯಿಂದಾಗಿ ನೀರು ತುಂಬಿದ್ದ ಅಣೆಕಟ್ಟೊಂದು ಕುಸಿದು ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆ ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಧಾರಾಕಾರ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಮಣಿಖೇಡಾ ಅಣೆಕಟ್ಟಿನ ಭಾಗಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ಪ್ರಮುಖ ನಗರವಾದ ಗ್ವಾಲಿಯರ್‌ನೊಂದಿಗೆ ದಾಟಿಯಾ ಜಿಲ್ಲೆಯನ್ನು ಸಂಪರ್ಕಿಸುವ ಮೂರು ಸೇತುವೆಗಳಲ್ಲಿ ಒಂದು ಕುಸಿದು ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದೆ.

ವೀಡಿಯೋ ವೀಕ್ಷಿಸಿ…..

- Advertisement -

ಅಣೆಕಟ್ಟಿನ ಎಲ್ಲಾ 10 ಗೇಟ್‌ಗಳನ್ನು ತೆರೆಯಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. 2013 ರಲ್ಲಿ ಇದೇ ಸೇತುವೆ ಕುಸಿದು ಬಿದ್ದು 115 ಯಾತ್ರಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದರು. ಈ ಸೇತುವೆ ಪ್ರಸಿದ್ಧ ದುರ್ಗಾ ದೇವಾಲಯ ಇರುವ ರತನ್ ಗಢ ನಗರಕ್ಕೆ ಇರುವ ಮುಖ್ಯ ರಸ್ತೆಯಾಗಿದೆ.

ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಗ್ವಾಲಿಯರ್ ತೀವ್ರವಾಗಿ ತತ್ತರಿಸಿದೆ. ವಾಯುಪಡೆಯ ಸಹಾಯದಿಂದ ಈ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.



Join Whatsapp