ರೈಲ್ವೇ ಲೆವೆಲ್ ಕ್ರಾಸ್ ಗೇಟ್ ನಿಂದ ವಾಹನ ಸಂಚಾರಕ್ಕೆ ನಿಗದಿತ ಅವಧಿಗಿಂತ ಹೆಚ್ಚು ಸಮಯ ನಿರ್ಬಂಧ, ರೈಲ್ವೇ ಅಧಿಕಾರಿಯನ್ನು ಭೇಟಿಯಾದ ಅಮೆಮ್ಮಾರ್ ನಿಯೋಗ

Prasthutha|

- Advertisement -

ಫರಂಗಿಪೇಟೆ, ಸೆ.16: ರಾಷ್ಟ್ರೀಯ ಹೆದ್ದಾರಿಯಿಂದ 200ಮೀ ಅಂತರದಲ್ಲಿರುವ ಅಮೆಮ್ಮಾರ್, ಕೊಟ್ಟಿಂಜ, ಅಬ್ಬೆಟ್ಟು, ಮಲ್ಲುರು, ಪೋಳಲಿ, ಕೊಡ್ಮಾನ್ ಇತ್ಯಾದಿ ಪ್ರದೇಶಗಳಿಗೆ ಹಾದು ಹೋಗುವ ಅಮೆಮ್ಮಾರ್ ರೈಲ್ವೇ ಲೆವೆಲ್ ಕ್ರಾಸ್ ನಲ್ಲಿ ರೈಲು ಸಂಚಾರದ ಸಮಯದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಿಸುವ ರೈಲ್ವೇ ಗೇಟ್ ಹಾಕುವ ಸಮಯ ಮಿತಿ ಮೀರಿದ್ದು ಈ ಬಗ್ಗೆ ಪುದು ಗ್ರಾಮ ಪಂಚಾಯತ್ ಸದಸ್ಯ ಮೊಹಮ್ಮದ್ ಶಾಫಿ ಲೀಡರ್ ರವರ ನೇತ್ರತ್ವದ ಅಮೆಮ್ಮಾರ್ ನಾಗರಿಕರ ನಿಯೋಗ ರೈಲ್ವೇ ಹಿರಿಯ ವಿಭಾಗದ ಇಂಜಿನಿಯರ್ ರವರನ್ನು ಪುತ್ತೂರು ನಲ್ಲಿ ಭೇಟಿ ಮಾಡಿ ಇದರಿಂದ ಸಾರ್ವಜನಿಕರಿಗಾಗುವ ತೊಂದರೆ ಬಗ್ಗೆ ವಿವರಿಸಿ ಪರ್ಯಾಯ ಅಂಡರ್ ಪಾಸ್ ಬದಲಿ ರಸ್ತೆಯನ್ನು ದುರಸ್ಥಿಗೊಳಿಸಲು ಆಗ್ರಹಿಸಿತು

30 ರಿಂದ 40 ನಿಮಿಷಗಳ ಕಾಲ ರೈಲ್ವೇ ಗೇಟ್ ಹಾಕಿ ಲೆವೆಲ್ ಕ್ರಾಸ್ ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಿಸುವ ಸಂದರ್ಭದಲ್ಲಿ ಶಾಲಾ ಬಸ್ ಗಳ ಮೂಲಕ ತೆರಳುವ ವಿದ್ಯಾರ್ಥಿಗಳಿಗೆ, ಕೆಲಸದ ನಿಮಿತ್ತ ತೆರಳುವ ವಾಹನ ಸವಾರರಿಗೆ, ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಸಂಕಷ್ಟ ಎದುರಿಸುವಂತಾಗಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ನಾಗರಿಕರಿಗಾಗುವ ಸಮಸ್ಯೆಗಳ ಬಗ್ಗೆ ಅರಿತು ಸೂಕ್ತ ಬದಲಿ ಪರ್ಯಾಯ ರಸ್ತೆ ವ್ಯವಸ್ಥೆಗೊಳಿಸಲು ಸಾರ್ವಜನಿಕ ಸಹಿ ಸಂಗ್ರಹಿಸಿ ಅಮೆಮ್ಮಾರ್ ನಿಯೋಗ ರೈಲ್ವೇ ಅಧಿಕಾರಿಯವರಲ್ಲಿ ಲಿಖಿತ ಮನವಿ ನೀಡಿತು

- Advertisement -

ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಶೀರ್ ತಂಡೇಲ್, ಎಸ್.ಡಿ.ಟಿ.ಯು ರಾಜ್ಯ ಕಾರ್ಯದರ್ಶಿ ಖಾದರ್ ಅಮೆಮ್ಮಾರ್, ಹಬೀಬ್ ಅಮೆಮ್ಮಾರ್ ನಿಯೋಗದಲ್ಲಿದ್ದರು

Join Whatsapp