ಜನ್ಮದಿನದಂದು ದೆಹಲಿಯಲ್ಲಿ ಪ್ರಧಾನಿ ಮೋದಿ ಮೆಟ್ರೋ ರೈಡ್

Prasthutha|

- Advertisement -

ನವದೆಹಲಿ: ದೆಹಲಿಯ ದ್ವಾರಕ ಏರ್‌ ಪೋರ್ಟ್ ಎಕ್ಸ್‌ ಪ್ರೆಸ್ ಮಾರ್ಗದ ವಿಸ್ತರಣೆಯನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೆಟ್ರೋ ರೈಲಿನಲ್ಲಿ ಸಾಮಾನ್ಯ ಜನರೊಂದಿಗೆ ಪ್ರಯಾಣಿಸಿದರು.

ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಮೋದಿ ಮೆಟ್ರೋದಲ್ಲಿ ಸಂಚರಿಸಿದ ಸಂದರ್ಭ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ತಮ್ಮನ್ನು ಸ್ವಾಗತಿಸಿದ ಮಕ್ಕಳಿಗೆ ಮೋದಿಯವರು ಚಾಕ್ಲೇಟ್‌ಗಳನ್ನು ನೀಡಿದ್ದು, ಅನೇಕ ಪ್ರಯಾಣಿಕರು ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

- Advertisement -

Join Whatsapp