ಪ್ಲಾಟ್‌ಫಾರ್ಮ್‌ನಲ್ಲಿ ಲಂಚ್ ಬಾಕ್ಸ್ ಕ್ಲೀನ್ ಮಾಡುತ್ತಿದ್ದವನಿಗೆ ಗುದ್ದಿದ ರೈಲು ; ಸ್ಥಳದಲ್ಲೇ ಮೃತ್ಯು

Prasthutha|

ಮುಂಬೈ: ಮುಂಬೈನ ಮಲಾಡ್ ರೈಲು ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ ದುರ್ಘಟನೆಯಲ್ಲಿ 17 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ.

- Advertisement -

ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ 3ರಲ್ಲಿ ಯುವಕ ತನ್ನ ಲಂಚ್ ಬಾಕ್ಸ್ ಕ್ಲೀನ್ ಮಾಡುತ್ತಿದ್ದ. ಆಗ ವೇಗವಾಗಿ ಬಂದ ಲೋಕಲ್ ಟ್ರೈನ್‌ಗೆ ಸಿಲುಕಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡ ಯುವಕ ಕೊನೆಯುಸಿರೆಳೆದಿದ್ದಾನೆ. ಮೃತ ಯುವಕನನ್ನು ಮಯಾಂಕ್ ಅನಿಲ್ ಶರ್ಮಾ ಎಂದು ಗುರುತಿಸಲಾಗಿದೆ. ಈ ಇಡೀ ದುರ್ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ದುರ್ಘಟನೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಮಯಾಂಕ್ ತನ್ನ ಸ್ನೇಹಿತರೊಂದಿಗೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಊಟ ಮಾಡಿ ಬಳಿಕ ಸ್ನೇಹಿತನೊಂದಿಗೆ ಪ್ಲಾಟ್‌ಫಾರ್ಮ್ ಅಂಚಿಗೆ ತೆರಳಿ ಮತ್ತು ಕೈ ಮತ್ತು ಲಂಚ್ ಬಾಕ್ಸ್ ಕ್ಲೀನ್ ಮಾಡುತ್ತಾರೆ. ಈ ಸಮಯದಲ್ಲಿ ವೇಗವಾಗಿ ಬಂದ ರೈಲೊಂದು ಬಾಲಕನಿಗೆ ಡಿಕ್ಕಿ ಹೊಡೆದಿದೆ. ರೈಲಿನ ವೇಗಕ್ಕೆ ಯುವಕರು ತೂರಿ ಬಿದ್ದಿದ್ದಾರೆ. ಆಧರೆ, ತೀವ್ರವಾಗಿ ಗಾಯಗೊಂಡ ಮಯಾಂಕ್ ಸ್ಥಳದಲ್ಲೇ ಮೃತಪಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.