ಬಂಟ್ವಾಳ: ಮಟ್ಕಾ ಜುಗಾರಿ ಅಡ್ಡೆಗೆ ದಾಳಿ; ಓರ್ವನ ಬಂಧನ

Prasthutha|

ಬಂಟ್ವಾಳ: ಪುದು ಗ್ರಾಮದ ಕಡೆಗೋಳಿ ಜಂಕ್ಷನ್‌ನಲ್ಲಿದ್ದ ಅಕ್ರಮ ಮಟ್ಕಾ ಜುಗಾರಿ ಅಡ್ಡೆಗೆ ಸೆ. 8ರಂದು ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಓರ್ವ ಆರೋಪಿ ಸೇರಿದಂತೆ ನಗದು, ಸೊತ್ತಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -

ಕಳ್ಳಿಗೆ ಗ್ರಾಮ ನಿವಾಸಿ ಮಹೇಶ್‌ ಬಂಧಿತ ಆರೋಪಿ. ಬಂಟ್ವಾಳ ಡಿವೈಎಸ್‌ಪಿ ಆದೇಶದಂತೆ ಗ್ರಾಮಾಂತರ ಪಿಎಸ್‌ಐ ನೇತೃತ್ವದ ತಂಡ ಓರ್ವನನ್ನು ಬಂಧಿಸಿದ್ದು, ಆಟದಲ್ಲಿ ತೊಡಗಿದ್ದ ಇತರರು ಪರಾರಿಯಾಗಿದ್ದಾರೆ.

ಆತನಿಂದ ಮಟ್ಕಾ ಚೀಟಿ, ಪೆನ್‌ ಹಾಗೂ 880 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp