ಉಗ್ರರ ಮೇಲೆ ಪ್ರಯೋಗಿಸಬೇಕಾದ ಅಸ್ತ್ರವನ್ನು ಕೇಂದ್ರ ನಮ್ಮ ವಿರುದ್ಧ ಪ್ರಯೋಗಿಸುತ್ತಿದೆ: ರಾಹುಲ್ ಕಿಡಿ

Prasthutha|

ನವದೆಹಲಿ, ಜುಲೈ 28: ಭಾರತದಲ್ಲಿ ಪೆಗಾಸಸ್ ಸ್ಪೈವೇರ್ ಮೂಲಕ ಗಣ್ಯರನ್ನು ಕಣ್ಗಾವಲಿನಲ್ಲಿಟ್ಟಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ. ಇಂದು ಒಟ್ಟು 14 ಪ್ರತಿಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಸಭೆ ನಡೆಸಿ ಪೆಗಾಸಸ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಏನೆಲ್ಲ ಕಾರ್ಯತಂತ್ರ ರೂಪಿಸಬೇಕು ಎಂಬುವುದರ ಕುರಿತು ಚರ್ಚಿಸಿದೆ. ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾರತದಲ್ಲಿ ಪೆಗಾಸಸ್ ಸ್ಪೈವೇರ್ ಮೂಲಕ ಗಣ್ಯರ ಮೇಲೆ ಕಣ್ಣಿಡಲಾಗಿದೆಯೇ ಎಂದು ಪ್ರಶ್ನಿಸಿದರು.

- Advertisement -

ಈ ವಿವಾದದ ಬಗ್ಗೆ ಸ್ಪಷ್ಟನೆ ಕೊಡುವಂತೆ ಪ್ರಧಾನಿ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿದ್ದಾರೆ . ಮಾತ್ರವಲ್ಲದೇ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಪೆಗಾಸಸ್ ಕದ್ದಾಲಿಕೆ ವಿವಾದದ ಬಗ್ಗೆ ಚರ್ಚಿಸುವುದರ ಮೇಲೆ ನಿರ್ಬಂಧ ಹೇರಿರುವ ಕುರಿತು ವಿವರಣೆ ಕೊಡುವಂತೆ ಕೇಂದ್ರವನ್ನು ಕೋರಿದ್ದಾರೆ.

ಸಂಸತ್ತಿನಲ್ಲಿ ಪೆಗಾಸಸ್ ಸ್ಪೈವೇರ್ ಬಗ್ಗೆ ಮಾತನಾಡಲು ಪ್ರಯತ್ನಿಸಿದರೆ ನಮ್ಮ ದ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಕೇಂದ್ರ ಸರ್ಕಾರ ಪೆಗಾಸಸ್ ಖರೀದಿಸಿದೆಯೇ ಎಂಬದನ್ನು ಬಹಿರಂಗಪಡಿಸಲಿ. ಪೆಗಾಸೆಸ್ ಕಣ್ಗಾವಲಿನಲ್ಲಿ ಪ್ರತಿಪಕ್ಷದ ನಾಯಕರ ಜೊತೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಚಿವರು ಇದ್ದಾರೆ. ನಮ್ಮ ಮೇಲೆಯೇ ಸ್ಪೈವೇರ್ ಬಳಸಿ ಕಣ್ಗಾವಲಿನಲ್ಲಿಡುವುದರ ಉದ್ದೇಶವನ್ನು ಸ್ಪಷ್ಟಪಡಿಸುವಂತೆ ರಾಹುಲ್ ಕೇಂದ್ರವನ್ನು ಕೋರಿದ್ದಾರೆ.

- Advertisement -


ರಾಷ್ಟ್ರ ವಿರೋಧಿಗಳಿಗೆ ಬಳಸಬೇಕಾಗಿದ್ದ ಪೆಗಾಸೆಸ್ ಸ್ಪೈವೇರ್ ಅನ್ನು ನಮ್ಮ ಮೇಲೆಯೇ ಪ್ರಯೋಗಿಸುತ್ತಿರುವ ಅಪಾಯಕಾರಿ ಬೆಳವಣಿಗೆ. ಕೇಂದ್ರ ಈ ನಡೆಯನ್ನು ರಾಷ್ಟ್ರವಿರೋಧಿಯೆಂದು ಬಣ್ಣಿಸಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದಿದ್ದಾರೆ. ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿರುವಾಗ ಪೆಗಾಸೆಸ್ ಕುರಿತು ಚರ್ಚೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡುತಿಲ್ಲ. ನರೇಂದ್ರ ಮೋದಿಯವರು ನಿಮ್ಮ ಫೋನುಗಳ ಗುರಿಯಾಗಿಸಿ ಬೇಟೆಯಾಡುತ್ತಿದ್ದಾರೆದೆ. ನನ್ನನ್ನೂ ಸೇರಿ ಅನೇಕ ರಾಜಕೀಯ ಗಣ್ಯರು, ಹೋರಾಟಗಾರರ ಮೇಲೆ ಕಣ್ಣಿಡಲಾಗಿದೆ. ಇಷ್ಟೆಲ್ಲ ಆದರೂ ನಾವು ಮಾತನಾಡಬಾರದೆಂದು ಕೇಂದ್ರ ಪ್ರತಿಪಾದಿಸುತ್ತಿದೆ. ಇದರ ವಿರುದ್ಧ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ರಾಹುಲ್ ಹೇಳಿದರು.


ಇಂದು ಒಟ್ಟು 14 ಪ್ರತಿಪಕ್ಷಗಳು ಸೇರಿ ಸಭೆ ನಡೆಸಿದ್ದವು. ಈ ಸಭೆಯಲ್ಲಿ ಅಧೀರ್ ರಂಜನ್ ಚೌಧರಿ, ಜೈರಾಮ್ ರಮೇಶ್, ಮಲ್ಲಿಕಾರ್ಜುನ ಖರ್ಗೆ, ಡಿಎಂಕೆಯ ಟಿ.ಆರ್.ಬಾಲು, ಕನಿಮೋಳಿ, ತಿರುಚಿ ಸಿವಾ, ಎನ್ ಸಿಪಿ ಯ ಸುಪ್ರಿಯಾ ಸುಲೇ, ಪ್ರಫುಲ್ ಪಟೇಲ್, ಶಿವಸೇನೆಯ ಸಂಜಯ್ ರಾವತ್, ಅರವಿಂದ ಸಾವಂತ್, ಕೇರಳ ಕಾಂಗ್ರೆಸ್ (ಎಂ) ನ ಥಾಮಸ್ ಚಾಜಿಕದನ್, ರಾಷ್ಟ್ರೀಯ ಸಮ್ಮೇಳನದ ಹಸ್ನೈನ್ ಮಸೂದಿ, ಆರ್ ಎಸ್ ಪಿಯ ಎನ್ಕೆ ಪ್ರೇಮಚಂದ್ರನ್, ಕೇರಳದ ಮುಸ್ಲಿಮ್ ಲೀಗ್ ನ ಮುಹಮ್ಮದ್ ಬಶೀರ್, ಸಿಪಿಎಂನ ಎಸ್ ವೆಂಕಟೇಶನ್ ಮತ್ತು ಎಎಮ್ ಆರಿಫ್. ಸೇರಿ ಇನ್ನೂ ಹಲವು ಪ್ರಮುಖ ಪಕ್ಷಗಳ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

Join Whatsapp