ಸ್ಥಳೀಯರಿಗೆ ಉದ್ಯೋಗ ನೀಡದ MRPL : ಸಂಸತ್ ನಲ್ಲಿ ಸರ್ಕಾರದ ಗಮನ ಸೆಳೆದ ಪ್ರಜ್ವಲ್ ರೇವಣ್ಣ

Prasthutha|

ನವದೆಹಲಿ, ಜು.28: ಮಂಗಳೂರಿನ MRPL ಉದ್ದಿಮೆಯಲ್ಲಿನ ಉದ್ಯೋಗಾವಕಾಶಗಳು ಸ್ಥಳೀಯರಿಗೆ ನೀಡದೆ ಹೊರಗಿನವರಿಗೆ ನೀಡುತ್ತಿರುವ ವಿಷಯವನ್ನು ಸಂಸದ ಪ್ರಜ್ವಲ್ ರೇವಣ್ಣ ಬುಧವಾರ ಸಂಸತ್ ನಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು.
ಮಂಗಳೂರಿನ ಎಂಆರ್ ಪಿಎಲ್ ನ ಉದ್ಯೋಗವನ್ನು ಸ್ಥಳೀಯರಿಗೆ ನೀಡುವಂತೆ ಇತ್ತೀಚೆಗೆ ಅಲ್ಲಿ ಪ್ರತಿಭಟನೆ ನಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ?. ಎಂಆರ್ ಪಿಎಲ್ ನಲ್ಲಿ ಇರುವ ಉದ್ಯೋಗಗಳು ಮತ್ತು ಸ್ಥಳೀಯರಿಗೆ ನೀಡಿರುವ ಉದ್ಯೋಗ ವಿವರಗಳನ್ನು ನೀಡಿ ಎಂದು ಪ್ರಜ್ವಲ್ ಸದನದಲ್ಲಿ ಪ್ರಶ್ನೆ ಕೇಳಿದ್ದಾರೆ.

- Advertisement -


ಸಾರ್ವಜನಿಕ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ನಿಯಮಗಳಿವೆಯೇ?. ಇದ್ದರೆ ಎಂಆರ್ ಪಿಎಲ್ ನಲ್ಲಿ ಸ್ಥಳೀಯರಿಗೆ ಉದ್ಯೋಗ ನಿರಾಕರಿಸಲು ಕಾರಣವೇನು?. ನಿಯಮ ಉಲ್ಲಂಘಿಸಿದ್ದಕ್ಕೆ ಕಂಪನಿಯ ಯಾವ ಅಧಿಕಾರಿಯ ಮೇಲೆ ಕ್ರಮಕೈಗೊಳ್ಳಲಾಗಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.


ಇದಕ್ಕೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಪರೇಶ್ವರ್ ತೇಲಿ ಲಿಖಿತ ಉತ್ತರ ನೀಡಿದ್ದು, ಎಂಆರ್ ಪಿಎಲ್ ನಲ್ಲಿ ಉದ್ಯೋಗಕ್ಕೆ ಆಗ್ರಹಿಸಿ ಸ್ಥಳೀಯರು ಇತ್ತೀಚೆಗೆ ಪ್ರತಿಭಟನೆ ನಡೆಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಎಂಆರ್ ಪಿಎಲ್ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಅಲ್ಲಿನ ಉದ್ಯೋಗದ ನೇಮಕಾತಿಯಲ್ಲಿ ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿದೆ ಎಂದು ಹೇಳಿ ನೇಮಕಾತಿಗೊಂಡವರ ಪಟ್ಟಿಯನ್ನು ನೀಡಿದೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್, ಮಂಗಳೂರಿನ MRPL ಉದ್ದಿಮೆಯಲ್ಲಿನ ಉದ್ಯೋಗಾವಕಾಶಗಳು ಸ್ಥಳೀಯರಿಗೆ ಸಿಗದ ಕುರಿತಾಗಿ ಉತ್ತರಿಸುವಂತೆ ಪ್ರಜ್ವಲ್ ರೇವಣ್ಣ ಒಕ್ಕೂಟ ಸರ್ಕಾರವನ್ನು ಪ್ರಶ್ನಿಸಿದ್ದಾರೆ, ಸರ್ಕಾರದಿಂದ ಸಿಕ್ಕ ಉತ್ತರ ನಿರಾಶಾದಾಯಕವಾಗಿರುವುದು ಬೇಸರದ ಸಂಗತಿ. ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸಂಸದರೇ ಎಂದು ತಿಳಿಸಿದ್ದಾರೆ.

Join Whatsapp