ರಾಹುಲ್ ಗೆ ಇನ್ನೂ ಮುಗಿದಿಲ್ಲ ಇಡಿ ಬಿಸಿ : ಇಂದೂ ವಿಚಾರಣೆ ಮುಂದುವರಿಕೆ!

Prasthutha|

ನವದೆಹಲಿ: ರಾಹುಲ್​ ಗಾಂಧಿಗೆ ಇಂದೂ ಇಡಿ ವಿಚಾರಣೆಯ ಬಿಸಿ ಮುಟ್ಟಲಿದ್ದು, ಜಾರಿ ನಿರ್ದೇಶನಾಲಯ ನ್ಯಾಷನಲ್​​​​ ಹೆರಾಲ್ಡ್​ ಕೇಸ್​ನಲ್ಲಿ ತನಿಖೆ ನಡೆಸಲಿದ್ದು ಪ್ರಶ್ನೆಗಳ ಸರಣಿ ಮುಂದುವರೆಸಲಿದೆ ಎಂದು ಮಾಹಿತಿಯು ದೊರಕಿದೆ.

- Advertisement -

ಇಡಿ ನಿನ್ನೆ ಬರೋಬ್ಬರಿ 11 ಗಂಟೆ ವಿಚಾರಣೆ ಮಾಡಿದ್ದು ಮತ್ತೇ ವಿಚಾರಣೆಗೆ ಮತ್ತೆ ಬರಲು ಜಾರಿ ನಿರ್ದೇಶನಾಲಯ ಸೂಚನೆ ನೀಡಿತ್ತು. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ವಿಚಾರಣೆಯಿಂದ ರಾಹುಲ್ ಹೊರಬಂದಿದ್ದು
ಸತತ 5 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.

ಬೆಳಗ್ಗೆ 11.30ರಿಂದ 2.15ರವರೆಗೆ ವಿಚಾರಣೆ ನಡೆಸಿದ್ದ ED , ಆ ಬಳಿಕ 1 ಗಂಟೆಯ ಕಾಲ ರಾಹುಲ್ ಗಾಂಧಿಯನ್ನು ಭೋಜನಕ್ಕೆ ಬಿಟ್ಟಿದ್ದರು.
ರಾತ್ರಿ 10 ಗಂಟೆ ಸುಮಾರಿಗೆ ಜಾರಿ ನಿರ್ದೇಶನಾಲಯ ವಿಚಾರಣೆ ಮುಗಿಸಿದ್ದು ವಿಚಾರಣೆ ಎದುರಿಸಿ ಮನೆಗೆ ಬಂದಿರುವ ರಾಹುಲ್ ಗಾಂಧಿ, ಮತ್ತೆ ಇಂದೂ ಹಾಜರಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ.



Join Whatsapp