ಜಡಿ ಮಳೆಯಲ್ಲೇ ರಾಹುಲ್ ಗಾಂಧಿ ಭಾಷಣ:  ನಟಿ ರಮ್ಯಾ ಹೇಳಿದ್ದೇನು?

Prasthutha|

ಬೆಂಗಳೂರು: ಭಾರತ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್  ನಾಯಕ ರಾಹುಲ್ ಗಾಂಧಿ ಭಾನುವಾರ  ಮಳೆಯನ್ನೂ ಲೆಕ್ಕಿಸದೆ ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ.

- Advertisement -

ಈ ಚಿತ್ರವನ್ನು ನಟಿ ರಮ್ಯಾ ಕೂಡ ಶೇರ್ ಮಾಡಿದ್ದು,  ಇಲ್ಲಿ ರಾಹುಲ್ ಗಾಂಧಿ ಮಳೆಯಲ್ಲಿ ಭಾಷಣ ಮಾಡುತ್ತಿರುವುದು ಸುದ್ದಿಯಲ್ಲ, ಆ ಜಡಿ ಮಳೆಯಲ್ಲಿಯೂ ಭಾಷಣ ಕೇಳಲು ಸಾಕಷ್ಟು ಮಂದಿ ನೆರೆದಿರುವುದೇ ವಿಶೇಷ. ಜನ ನೆರೆದಿರುವುದೇ ಎಲ್ಲವನ್ನೂ ನಿಮಗೆ ತಿಳಿಸುತ್ತದೆ. ಅಂದರೆ ರಾಹುಲ್ ಗಾಂಧಿ ಭಾಷಣ ಕೇಳಲು ಜನ ಕಿಕ್ಕಿರಿದು ನಿಂತಿರುವುದು ಗಮನಸೆಳೆದಿದೆ ಎಂದು ಹೇಳುವ ಮೂಲಕ ರಮ್ಯಾ ಅವರು ಕಾಂಗ್ರೆಸ್ ನಾಯಕನನ್ನು ಹಾಡಿ ಹೊಗಳಿದ್ದಾರೆ.

Join Whatsapp