ಸಹೋದರಿ ಪ್ರಿಯಾಂಕಾ ಜೊತೆ ರಾಹುಲ್ ಗಾಂಧಿ ಸ್ನೋಬಾಲ್ ಫೈಟ್

Prasthutha|

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು (ಸೋಮವಾರ) ಕೊನೆಗೊಳ್ಳಲಿದ್ದು, ಈ ವೇಳೆ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಜತೆಗೆ ಸ್ನೋಬಾಲ್ ಫೈಟ್ ಆಟ ಆಡಿದ್ದಾರೆ.

- Advertisement -


ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಮಕ್ಕಳಂತೆ ಆಟ ಆಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ವೀಡಿಯೋದಲ್ಲಿ ಏನಿದೆ?: ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಇಬ್ಬರೂ ತಮಾಷೆಗಾಗಿ ಸ್ನೋಬಾಲ್ನಲ್ಲಿ ಫೈಟ್ ಮಾಡಿದ್ದಾರೆ. ಜೊತೆಗೆ ಇಬ್ಬರು ಪರಸ್ಪರ ಸ್ನೋ ಬಾಲ್ ಎಸೆದುಕೊಂಡಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಗಾಂಧಿ ತಲೆಯ ಮೇಲೆ ಮುಷ್ಟಿ ಹಿಮದ ಮಳೆಗೈದಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸುತ್ತಲೂ ನಿಂತಿರುವುದು ಕಂಡುಬಂದಿದೆ.

Join Whatsapp