ರಾಹುಲ್ ಗಾಂಧಿ ಮಹತ್ವಾಕಾಂಕ್ಷೆಯ ತಾಯಿಯ ಬಲಿಪಶು: ಕಂಗನಾ ರನೌತ್

Prasthutha|

ನವದೆಹಲಿ : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಹತ್ವಾಕಾಂಕ್ಷೆಯ ತಾಯಿಯ ಬಲಿಪಶುವಾಗಿದ್ದಾರೆ ಎಂದು ನಟಿ ಮತ್ತು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಹೇಳಿದ್ದಾರೆ.

- Advertisement -

ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕಂಗನಾ ರನೌತ್, ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಇಬ್ಬರೂ ಸೋನಿಯಾ ಗಾಂಧಿಯಿಂದ ರಾಜಕೀಯಕ್ಕೆ ಒತ್ತಾಯಿಸಲ್ಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ರಾಜಕೀಯದಲ್ಲಿ ಉಳಿಯಲು ಅವರ ತಾಯಿಯಿಂದ ಚಿತ್ರಹಿಂಸೆ ಪಡೆಯುತ್ತಿದ್ದಾರೆ ಮತ್ತು ಅವರಿಗೆ ತಮ್ಮದೇ ಆದ ಜೀವನವನ್ನ ನಡೆಸಲು ಅವಕಾಶ ನೀಡಬೇಕಾಗಿತ್ತು ಎಂದು ರನೌತ್ ಹೇಳಿದ್ದಾರೆ.



Join Whatsapp