ವೇದಿಕೆಯಲ್ಲಿ ಕಣ್ಣೀರು ಹಾಕಿದ ಡಾ ಕೆ. ಸುಧಾಕರ್

Prasthutha|

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಕಣ್ಣೀರು ಹಾಕಿದ್ದಾರೆ. ರ‍್ಯಾಲಿಯಲ್ಲಿ ಭಾಷಣದ ವೇಳೆಯೇ ಕೆಲ ಕ್ಷಣ ಭಾವುಕರಾಗಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಸ್ಮರಿಸಿಕೊಂಡು ಅವರು ಅತ್ತಿದ್ದಾರೆ.

- Advertisement -

ದೂರ ಮಾಡಿದ್ದೀರಿ, ದೂರ ಮಾಡಿದ್ದೀರಿ , ಕಳೆದ 10 ತಿಂಗಳಿಂದ ಅಜ್ಞಾತವಾಸದಲ್ಲಿದ್ದೇನೆ , ನಾನೇನು ತಪ್ಪು ಮಾಡಿಲ್ಲ , ನಾನೇನು ತಪ್ಪು ಮಾಡಿಲ್ಲ , ದಯವಿಟ್ಟು ನನ್ನ ಕೈ ಬಿಡಬೇಡಿ , ನಿಮ್ಮ ಮಗನಾಗಿ ನಿಮ್ಮ ಸೇವೆಯನ್ನು ಮಾಡುತ್ತೇನೆ ಎನ್ನುತ್ತಾ ಕಣ್ಣೀರು ಸುರಿಸಿದ್ದಾರೆ.

ಉಮೇದುವಾರಿಕೆ ಸಲ್ಲಿಕೆಗೆ ಕಡೇ ದಿನವಾದ ಗುರುವಾರ ಬಿಜೆಪಿ ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ರೋಡ್ ಶೋ ಕೈಗೊಂಡಿತ್ತು. ಕಾಂಗ್ರೆಸ್‌ಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಹೆಚ್ಚಿನ ಜನರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶಿಸಿತು. ಇದೇ ವೇಳೆ ಅಭ್ಯರ್ಥಿ ಡಾ ಕೆ.ಸುಧಾಕರ್ ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸಗಳು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಜೆಡಿಎಸ್ ಮೈತ್ರಿ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಕೊನೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದನ್ನು ಸ್ಮರಿಸಿ, ಭಾವುಕರಾಗಿ ಮಾತನಾಡಲಾಗದೇ ಭಾಷಣ ನಿಲ್ಲಿಸಿದ್ದಾರೆ.

- Advertisement -

ಪಕ್ಕದಲ್ಲಿಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.ಸುಧಾಕರ್ ಭುಜವನ್ನು ತಟ್ಟಿ ಸಮಾಧಾನಪಡಿಸಿದರು. ಹಾಗೆಯೇ ಪ್ರೇಕ್ಷಕರು ಸುಧಾಕರ್ ಅಳುವುದನ್ನು ನೋಡಲಾಗದೇ ಬೇಡ, ಬೇಡ ಎಂದು ಘೋಷಣೆಗಳನ್ನು ಕೂಗಿದರು.

Join Whatsapp