ನವದೆಹಲಿ : ಅನೇಕ ಸರ್ವಾಧಿಕಾರಿಗಳ ಹೆಸರುಗಳು ‘ಎಂ’ ಅಕ್ಷರದಿಂದ ಪ್ರಾರಂಭವಾಗಲು ಕಾರಣವೇನು? ಎಂದು ಕುತೂಹಲಕಾರಿ ಪ್ರಶ್ನೆಯೊಂದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಟ್ಟುಹಾಕಿದ್ದಾರೆ.
ಅನೇಕ ಸರ್ವಾಧಿಕಾರಿಗಳು ‘ಎಂ’ನಿಂದ ಆರಂಭವಾಗುವ ಹೆಸರುಗಳನ್ನು ಏಕೆ ಹೊಂದಿದ್ದಾರೆ? ಮಾರ್ಕಸ್, ಮುಸ್ಸೊಲಿನಿ, ಮಿಲೊಸೆವಿಕ್, ಮುಬಾರಕ್, ಮೊಬುಟು, ಮುಷರ್ರಫ್, ಮೈಕಾಂಬೆರೊ ಎಂದು ರಾಹುಲ್ ಗಾಂಧಿ ಹಲವು ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರ ಈ ಟ್ವೀಟ್ ಹಿಂದಿನ ಕಾರಣ ತಿಳಿದು ಬಂದಿಲ್ಲ. ಆದರೆ, ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಸರ್ವಾಧಿಕಾರಿ ಎಂದು ಆರೋಪಿಸುವ ಯತ್ನ ಎಂದು ವಿಶ್ಲೇಷಿಸಲಾಗಿದೆ.