ಕೊರೊನಾದಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ, ಸರಕಾರ ಮಾರಾಟದಲ್ಲಿ ನಿರತವಾಗಿದೆ | ರಾಹುಲ್ ಗಾಂಧಿ

Prasthutha|

ದೆಹಲಿ : ದೇಶದಾದ್ಯಂತ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, “ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿದ್ದು, ಮುಂದಿನ ಅಲೆಯಲ್ಲಿ ಗಂಭೀರವಾದ ಪರಿಣಾಮಗಳನ್ನು ತಪ್ಪಿಸಲು ಲಸಿಕೀಕರಣ ವೇಗವನ್ನು ಹೆಚ್ಚಿಸಬೇಕು” ಎಂದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ಆತಂಕವನ್ನುಂಟು ಮಾಡುತ್ತಿವೆ. ಮುಂದಿನ ಅಲೆಯಲ್ಲಿ ಗಂಭೀರವಾದ ಪರಿಣಾಮವನ್ನು ತಪ್ಪಿಸಲು ಲಸಿಕೀಕರಣ ವೇಗವನ್ನು ಹೆಚ್ಚಿಸಬೇಕು. ದಯವಿಟ್ಟು ನಿಮ್ಮ ಕಾಳಜಿಯನ್ನು ನೀವೇ ವಹಿಸಿ, ಏಕೆಂದರೆ, ಭಾರತ ಸರ್ಕಾರ ಮಾರಾಟದಲ್ಲಿ ನಿರತವಾಗಿದೆ” ಎಂದು ಹೇಳಿದ್ದಾರೆ.

- Advertisement -

“ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 46,164 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದೆ. ಕಳೆದ ಒಂದೇ ದಿನದಲ್ಲಿ 607 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ” ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

- Advertisement -