ರಾಹುಲ್ ಗಾಂಧಿಯ ಪೋಸ್ಟ್ ತೆಗೆದುಹಾಕಿದ ಫೇಸ್ ಬುಕ್

Prasthutha|

ನವದೆಹಲಿ: ದೆಹಲಿಯ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತ ಕುಟುಂಬವನ್ನು ರಾಹುಲ್ ಗಾಂಧಿ ಭೇಟಿ ಮಾಡಿ ಸಾಂತ್ವನ ಹೇಳುತ್ತಿರುವ ಫೋಟೋವನ್ನು ಫೇಸ್ ಬುಕ್ ತೆಗೆದುಹಾಕಿದೆ.

- Advertisement -


ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಆಗಿತ್ತು. ಇದನ್ನು ತೆಗೆದು ಹಾಕಿ, ಫೇಸ್ ಬುಕ್ ರಾಹುಲ್ ಗಾಂಧಿಯವರಿಗೆ ಮಾಹಿತಿಯನ್ನೂ ನೀಡಿದೆ. ಎನ್ ಸಿಪಿಸಿಆರ್- ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಫೇಸ್ ಬುಕ್ ಗೆ ಸಮನ್ಸ್ ನೀಡಿದ ವಾರದ ಬಳಿಕ ಫೇಸ್ ಬುಕ್, ಮೊದಲು ರಾಹುಲ್ ಗಾಂಧಿಯವರಿಗೆ ತಿಳಿಸಿ ಅನಂತರ ಅದನ್ನು ತೆಗೆದು ಹಾಕಿದೆ.


2015ರ ಬಾಲ ನ್ಯಾಯ ಕಾಯ್ದೆಯ 74ನೇ ಸೆಕ್ಷನ್, ಪೋಕ್ಸೋ ಕಾಯ್ದೆಯ 23ನೇ ಸೆಕ್ಷನ್, ಭಾರತೀಯ ದಂಡ ಸಂಹಿತೆಯ 288ಎ ಸೆಕ್ಷನ್ ಗಳ ಪ್ರಕಾರ ಇನ್ ಸ್ಟಾಗ್ರಾಮಿನಲ್ಲಿ ಅಪ್ ಲೋಡ್ ಮಾಡಿದ ಈ ಪೋಸ್ಟ್ , ಕಾನೂನು ಬಾಹಿರ ಎಂದು ಎನ್ ಸಿಪಿಸಿಆರ್ ನೋಟೀಸು ನೀಡಿತ್ತು. ಈ ಬಗ್ಗೆ ಫೇಸ್ ಬುಕ್ ಕಂಪೆನಿಯು ಈಮೇಲ್ ಮೂಲಕ ರಾಹುಲ್ ಗಾಂಧಿಯವರಿಗೆ ಮಾಹಿತಿ ನೀಡಿತ್ತು. ಇದಕ್ಕೆ ಮೊದಲು ಟ್ವಿಟರ್ ನಲ್ಲಿ ಇದೇ ಫೋಟೋಗಳನ್ನು ತೆಗೆದು ಹಾಕಲಾಗಿತ್ತು.



Join Whatsapp