‘ಇದು ಸಾವೋ ಅಥವಾ ಕೊಲೆಯೋ?’ : ಚಾಮರಾಜನಗರ ಘಟನೆ ಕುರಿತು ರಾಹುಲ್ ಗಾಂಧಿ ಆಕ್ರೋಶ

Prasthutha|

ಮೈಸೂರು : ಇದು ಸಾವೋ ಅಥವಾ ಕೊಲೆಯೋ? ವ್ಯವಸ್ಥೆ ಎಚ್ಚರಗೊಳ್ಳುವ ಮೊದಲು ಇನ್ನು ಇಂತಹ ಎಷ್ಟು ಸಾವು ನೋವುಗಳು ಸಂಭವಿಸುತ್ತವೋ ಎಂದು ಆಕ್ಸಿಜನ್ ಕೊರತೆಯುಂಟಾಗಿ ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

 ರಾಜ್ಯದಲ್ಲಿ ಕೊರೋನಾ ಅಟ್ಟಹಾಸದಿಂದಾಗಿ ಆಕ್ಸಿಜನ್ ಕೊರತೆಯುಂಟಾಗಿ ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ್ದು, ಇದು ಜಿಲ್ಲಾಡಳಿತದ ಬೇಜವಾಬ್ದಾರಿಯಿಂದ ನಡೆದಿರುವ ಘಟನೆ ಎಂದು ದೇಶಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಇದು ಸಾವೋ ಅಥವಾ ಕೊಲೆಯೋ ಎಂದು ಪ್ರಶ್ನಿಸಿದ್ದಾರೆ. ವ್ಯವಸ್ಥೆ ಎಚ್ಚರಗೊಳ್ಳುವ ಮೊದಲು ಇನ್ನು ಇಂತಹ ಎಷ್ಟು ಸಾವು ನೋವುಗಳು ಸಂಭವಿಸುತ್ತವೋ. ಸಾವನ್ನಪ್ಪಿರುವರ ಕುಟುಂಬಗಳಿಗೆ ಸಂತಾಪ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

Join Whatsapp