ಕೇರಳ ಕಾಂಗ್ರೆಸ್‌ನ ಸ್ಥಾಪಕ ಅಧ್ಯಕ್ಷ ಆರ್ ಬಾಲಕೃಷ್ಣ ಪಿಳ್ಳೈ ನಿಧನ

Prasthutha|

►ಮಗನ ಭರ್ಜರಿ ಗೆಲುವಿನ ಬೆನ್ನಲ್ಲೇ ಕೊನೆಯುಸಿರೆಳೆದ ತಂದೆ

ಕೊಲ್ಲಮ್: ಕೇರಳ ಕಾಂಗ್ರೆಸ್‌ನ ಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಆರ್ ಬಾಲಕೃಷ್ಣ ಪಿಳ್ಳೈ(86) ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ಬುಧವಾರ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.

- Advertisement -

ಕೇರಳ ಕಾಂಗ್ರೆಸ್ ನ ಮೊದಲ ಪ್ರಧಾನ ಕಾರ್ಯದರ್ಶಿಯಾಗಿದ್ದ  ಪಿಳ್ಳೈ, ಸರ್ಕಾರದ ಅಬಕಾರಿ, ಸಾರಿಗೆ ಮತ್ತು ವಿದ್ಯುಚ್ಛಕ್ತಿ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಪಿಳ್ಳೈ ಅವರ ಮಗ ಮಾಜಿ ಸಚಿವ ಕೆ ಬಿ ಗಣೇಶ್ ಕುಮಾರ್ ನಿನ್ನೆ ಕೇರಳದ ಪತ್ತನಪುರಂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.

- Advertisement -