ವಿಚಾರಕ್ಕಾಗಿ ಅಜ್ಜಿ, ತಂದೆ ಹತ್ಯೆಯಾಗಿದ್ದಾರೆ, ಆ ಬಗ್ಗೆ ಹೆಮ್ಮೆಯಿದೆ : ರಾಹುಲ್ ಗಾಂಧಿ

Prasthutha|

ನವದೆಹಲಿ : ಒಂದು ವಿಚಾರ ಸಮರ್ಥಿಸಿ ಬಲವಾಗಿ ನಿಂತಿದ್ದಕ್ಕಾಗಿ ತಮ್ಮ ತಂದೆ (ರಾಜೀವ್ ಗಾಂಧಿ) ಮತ್ತು ಅಜ್ಜಿ (ಇಂದಿರಾ ಗಾಂಧಿ) ಹತ್ಯೆಯಾಗಿದ್ದರು. ಇದು ನನಗೆ ಹೆಮ್ಮೆಯ ವಿಚಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಚಿಕಾಗೊ ವಿಶ್ವವಿದ್ಯಾಲಯದ ದೀಪೇಶ್ ಚಕ್ರವರ್ತಿ ಜೊತೆಗೆ ನಡೆಸಿದ ವರ್ಚುವಲ್ ಚರ್ಚೆಯಲ್ಲಿ ರಾಹುಲ್ ಗಾಂಧಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದರು.

- Advertisement -

ನನ್ನ ಅಜ್ಜಿ ಮತ್ತು ತಂದೆ ಒಂದು ವಿಚಾರಕ್ಕಾಗಿ ಹತ್ಯೆಯಾದರು. ಇದರ ಬಗ್ಗೆ ನನಗೆ ಹೆಮ್ಮೆಯಿದೆ. ಇದು ಅವರ ಬಗ್ಗೆ, ನನ್ನ ಸ್ಥಾನದ ಬಗ್ಗೆ ಮತ್ತು ನಾನೇನು ಮಾಡಬೇಕು ಎನ್ನುವ ಬಗ್ಗೆ ನನಗೆ ಅರ್ಥ ಮಾಡಿಸುತ್ತದೆ ಎಂದರು.

ಕಾಂಗ್ರೆಸ್ ನ ಕುಟುಂಬ ರಾಜಕಾರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಕುಟುಂಬದ ಸದಸ್ಯರು ಪ್ರಧಾನಿಯಾಗಿ 30 ವರ್ಷಗಳು ಕಳೆದಿವೆ. ನಮ್ಮ ಕುಟುಂಬದ ಮೇಲೆ ಈ ಆಪಾದನೆ ಅಚ್ಚರಿ ಮೂಡಿಸುತ್ತದೆ ಎಂದು ಅವರು ಹೇಳಿದರು.

- Advertisement -

ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್ ಗಳ ಬಗ್ಗೆ ಮಾತನಾಡಿದ ಅವರು, ಟ್ರೋಲ್ ಗಳ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ. ಯಾವುದರ ಪರ ನಿಲ್ಲಬೇಕು, ಏನು ಮಾಡಬೇಕು, ಏನು ಮಾತನಾಡಬೇಕು ಎಂಬ ಸಂಪೂರ್ಣ ಅರಿವು ನನಗಿದೆ. ಕೆಲವೊಮ್ಮೆ ಟ್ರೋಲ್ ಗಳು ನನಗೆ ಮಾರ್ಗದರ್ಶಕರಂತೆ ದಾರಿ ತೋರುತ್ತವೆ ಎಂದು ಹೇಳಿದರು.



Join Whatsapp