ಮುಸ್ಲಿಮರು ಪ್ರಧಾನಿಯಾಗುವುದು ಕಲ್ಪಿಸಲೂ ಸಾಧ್ಯವಿಲ್ಲ : ಗುಲಾಂ ನಬಿ ಆಝಾದ್

Prasthutha|

- Advertisement -

ಹೊಸದಿಲ್ಲಿ : ಮುಸ್ಲಿಂ ನಾಯಕರಿಗೆ ಭಾರತದ ಪ್ರಧಾನಿಯಾಗಬೇಕೆಂಬ ಕನಸು ಕಾಣಲು ಕೂಡ ಸಾಧ್ಯವಿಲ್ಲದ ಪರಿಸ್ಥಿತಿ ಈಗ ಭಾರತದಲ್ಲಿದೆ ಎಂದು ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಝಾದ್ ಹೇಳಿದ್ದಾರೆ. ಇನ್ನು ಮುಂದೆಯೂ ಪ್ರಧಾನಿ ಪಟ್ಟ ಮುಸ್ಲಿಮರಿಗೆ ಸಿಗುವ ಸಾಧ್ಯತೆ ಕಾಣುತ್ತಿಲ್ಲ ಎಂದು ಅವರು ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆರಂಭಿಕ ದಿನಗಳಲ್ಲಿ ಶೇಕಡಾ 99 ರಷ್ಟು ನಾಯಕರು ಚುನಾವಣಾ ಪ್ರಚಾರಕ್ಕಾಗಿ ತನ್ನನ್ನು ಕರೆದಿದ್ದರು. ಇಂದು ಅದು ನಲವತ್ತು ಶೆಕಡಾಗೆ ಇಳಿದಿದೆ. 1979 ರ ಸಾರ್ವತ್ರಿಕ ಚುನಾವಣೆಯಲ್ಲಿ ತಾನು ಶೇಕಡಾ 95 ರಷ್ಟು ಹಿಂದೂ ಮತಗಳನ್ನು ಹೊಂದಿರುವ ಮಹಾರಾಷ್ಟ್ರದಿಂದ ಸ್ಪರ್ಧಿಸಿದ್ದೆ. ಜನತಾ ಪಕ್ಷ ನನ್ನ ವಿರುದ್ಧ ಹಿಂದೂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆದರೂ ನಾನು ಗೆದ್ದಿದ್ದೇನೆ” ಎಂದು ಆಝಾದ್ ಹೇಳಿದ್ದಾರೆ.

- Advertisement -

ಬಿಜೆಪಿಗೆ ಸೇರುವ ವದಂತಿಗಳನ್ನು ಆಝಾದ್ ನಿರಾಕರಿಸಿದ್ದಾರೆ. “ಕಾಶ್ಮೀರದಲ್ಲಿ ಕಪ್ಪು ಹಿಮ ಆವರಿಸಿದಾಗ ನಾನು ಬಿಜೆಪಿಗೆ ಸೇರುತ್ತೇನೆ. ವದಂತಿಗಳನ್ನು ಹರಡುವ ಜನರು ನಾನು ಯಾರೆಂದು ತಿಳಿಯದವರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ರಾಜ್ಯಸಭೆಯಿಂದ ನಿವೃತ್ತರಾದ ಆಜಾದ್ ಅವರಿಗೆ ವಿದಾಯ ಕೋರುವ ಭಾಷಣದಲ್ಲಿ ಮೋದಿ ಕಣ್ಣೀರು ಹಾಕಿದ್ದರು. ತನ್ನ ಬಾಗಿಲುಗಳು ಯಾವಾಗಲೂ ನಿಮ್ಮ ಮುಂದೆ ತೆರೆದಿರುತ್ತವೆ ಎಂದು ಮೋದಿ ಆ ಸಂದರ್ಭದಲ್ಲಿ ಹೇಳಿದ್ದರು.

Join Whatsapp