ರಾಹುಲ್ ಗಾಂಧಿ ಪಪ್ಪು ಅಲ್ಲ, ನಿಜವಾಗಿಯೂ ಬುದ್ಧಿವಂತ: ರಘುರಾಮ್ ರಾಜನ್

Prasthutha|

ನವದೆಹಲಿ: ರಾಹುಲ್ ಗಾಂಧಿ ಪಪ್ಪು ಅಲ್ಲ, ಅವರು ನಿಜವಾಗಿಯೂ ಬುದ್ಧಿವಂತ ವ್ಯಕ್ತಿ ಎಂದು ಮಾಜಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

- Advertisement -

ಈ ಕುರಿತು ಮಾತನಾಡಿದ ಅವರು, ನಾನು ರಾಹುಲ್ ಗಾಂಧಿಯವರೊಂದಿಗೆ ಹಲವು ವರ್ಷಗಳಿಂದ ನಿಕಟವಾಗಿ ಕೆಲಸ ಮಾಡಿದ್ದೇನೆ. ಅವರೊಂದಿಗಿನ ಅವರ ಸಂವಹನದ ಆಧಾರದ ಮೇಲೆ ರಾಹುಲ್ ಗಾಂಧಿ ‘ಪಪ್ಪು’ ಅಲ್ಲ ಎಂದು ನನಗೆ ತಿಳಿದಿದೆ. ಅವರನ್ನು ‘ಪಪ್ಪು’ ಎಂದು ಲೇಬಲ್ ಮಾಡುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಮೌಲ್ಯಗಳ ಪರವಾಗಿ ನಾನು ನಿಂತಿದ್ದೇನೆ ಎಂದು ಹೇಳಿದ್ದಾರೆ.

Join Whatsapp