ಕೋರ್ಟಿನಿಂದ ಶಿಕ್ಷಿತರಾದವರಿಗೆ ಮೂರು ತಿಂಗಳ ಕಾಲಾವಕಾಶದ ಪ್ರತಿ ಹರಿದಿದ್ದ ರಾಹುಲ್ ಗಾಂಧಿ!

Prasthutha|

ನವದೆಹಲಿ: ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷಿತರಾದವರು ಮತ್ತು ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಗೊಳಗಾದ ಸಂಸದ ಮತ್ತು ಶಾಸಕರು ಸದನ, ಸಂಸತ್ ಗಳಿಂದ ಅನರ್ಹಗೊಳ್ಳುವರು.
ಆದರೆ 2013ರಲ್ಲಿ ಈ ನಿಯಮಕ್ಕೆ ಒಂದು ಸಣ್ಣ ತಿದ್ದುಪಡಿ ತರಲಾಗಿತ್ತು. ಹೀಗೆ ಶಿಕ್ಷಿತರಾದ ಸಂಸದರು, ಇಲ್ಲವೇ ಶಾಸಕರು ಜನಪ್ರತಿನಿಧಿಯಾಗಿ ಮೂರು ತಿಂಗಳು ಮುಂದುವರಿಯಬಹುದು. ಅಷ್ಟರಲ್ಲಿ ಅವರು ಮೇಲಿನ ಕೋರ್ಟ್ ಗಳಲ್ಲಿ ತಮ್ಮ ಪ್ರಕರಣ ಬಗೆಹರಿಸಿಕೊಳ್ಳಬಹುದು ಎನ್ನುವುದೇ ಆ ತಿದ್ದುಪಡಿ,
ಆದರೆ ಈ ತಿದ್ದುಪಡಿಯನ್ನು ತೀವ್ರವಾಗಿ ವಿರೋಧಿಸಿದ್ದ ಸಂಸದ ರಾಹುಲ್ ಗಾಂಧಿಯವರು ಅದರ ಪ್ರತಿಯನ್ನು ಸಂಸತ್ತಿನಲ್ಲಿ ಹರಿದು ಹಾಕಿದ್ದರು. ಈ ಹಳೆಯ ವಿಷಯ ಈಗ ಚರ್ಚೆಯ ಮುನ್ನೆಲೆಗೆ ಬಂದಿದೆ.



Join Whatsapp