ರಾಹುಲ್ ಗಾಂಧಿ ತಪ್ಪು ಮಾತನಾಡಿಲ್ಲ, ಅವರು ಯಾಕೆ ಕ್ಷಮೆಯಾಚಿಸಬೇಕು: ಶಶಿ ತರೂರ್

Prasthutha|

ನವದೆಹಲಿ: ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ವಿದೇಶಿ ಶಕ್ತಿಗಳು ನಮ್ಮ ದೇಶಕ್ಕೆ ಬರಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದಿಗೂ ಒತ್ತಾಯಿಸಲಿಲ್ಲ, ಅವರು ಯಾಕೆ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಮತ್ತು ಪ್ರತಿಯೊಬ್ಬರೂ ಅದರ ಬಗ್ಗೆ ತಿಳಿದುಕೊಳ್ಳಬೇಕು. ನಾನು ಅದರಲ್ಲಿ ಯಾವುದೇ ತಪ್ಪನ್ನು ಕೇಳಿಲ್ಲ ಎಂದು ಹೇಳಿದರು.

- Advertisement -


ಸಂಸತ್ತನ್ನು ನಡೆಸುವುದು ಸರಕಾರದ ಜವಾಬ್ದಾರಿಯಾಗಿದೆ. ಬಜೆಟ್ ಅಧಿವೇಶನ ನಡೆಯುತ್ತಿದೆ, ಹಣಕಾಸು ಮಸೂದೆಯನ್ನು ಅಂಗೀಕರಿಸುವ ಅಗತ್ಯವಿದೆ.ಇಂತಹ ಪ್ರಮುಖ ವಿಷಯಗಳಿರುವಾಗ, ನೀವು ಸಂಸತ್ತಿಗೆ ಯಾವುದೇ ಸಮಸ್ಯೆಯ ಮೇಲೆ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದರು.

- Advertisement -